HomeLatest Newsಹಣಕ್ಕಿಂತ ಫ್ಯಾಮಿಲಿ ಗೌರವವೇ ಮುಖ್ಯ: 40 ಕೋಟಿಯ ತಂಬಾಕು ಜಾಹೀರಾತಿಗೆ ನೋ ಅಂದ ಸುನಿಲ್ ಶೆಟ್ಟಿ

ಹಣಕ್ಕಿಂತ ಫ್ಯಾಮಿಲಿ ಗೌರವವೇ ಮುಖ್ಯ: 40 ಕೋಟಿಯ ತಂಬಾಕು ಜಾಹೀರಾತಿಗೆ ನೋ ಅಂದ ಸುನಿಲ್ ಶೆಟ್ಟಿ

ಬಾಲಿವುಡ್‌ನ ಖ್ಯಾತ ನಟರು ಪಾನ್ ಮಸಾಲಾ ಮತ್ತು ತಂಬಾಕು ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಇಂದು ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟರು ಇಂತಹ ಜಾಹೀರಾತುಗಳಲ್ಲಿ ನಟಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಇದೇ ಹಾದಿಯಲ್ಲಿ ಹೋಗದ ಹಿರಿಯ ನಟ ಸುನಿಲ್ ಶೆಟ್ಟಿ, ಬರೋಬ್ಬರಿ 40 ಕೋಟಿ ರೂಪಾಯಿಯ ಆಫರ್ ಅನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ ಸುನಿಲ್ ಶೆಟ್ಟಿ, ತಾವು ಈ ನಿರ್ಧಾರಕ್ಕೆ ಬರಲು ಕಾರಣವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ. “ನನಗೆ ಇಂದು ಚಿತ್ರರಂಗದಲ್ಲಿ ಗುರುತು ಸಿಕ್ಕಿರುವುದು ನನ್ನ ಆರೋಗ್ಯ ಮತ್ತು ಫಿಟ್‌ನೆಸ್‌ನಿಂದಾಗಿ. ಈ ದೇಹವನ್ನು ನಾನು ದೇವಾಲಯದಂತೆ ಪೂಜಿಸುತ್ತೇನೆ. ನಾನೇ ನಂಬದ ವಿಷಯವನ್ನು ಹಣಕ್ಕಾಗಿ ಪ್ರಚಾರ ಮಾಡುವುದು ನನಗೆ ನಾನೇ ಮಾಡಿಕೊಳ್ಳುವ ದ್ರೋಹ” ಎಂದು ಅವರು ಹೇಳಿದ್ದಾರೆ.

ಜಾಹೀರಾತಿನ ಬಗ್ಗೆ ವಿವರಿಸಿದ ಅವರು, “ನನಗೆ ತಂಬಾಕು ಜಾಹೀರಾತಿಗಾಗಿ 40 ಕೋಟಿ ರೂಪಾಯಿಯ ಆಫರ್ ಬಂದಿತ್ತು. ಆಗ ನನಗೆ ಹಣದ ಅವಶ್ಯಕತೆ ಇತ್ತೇನೋ ನಿಜ, ಆದರೆ ನಾನು ಒಪ್ಪಲಿಲ್ಲ. ನಾನು ಇಂತಹ ಕೆಲಸ ಮಾಡಿದರೆ ಅದು ನನ್ನ ಮಕ್ಕಳಾದ ಅಹಾನ್, ಅಥಿಯಾ ಮತ್ತು ಅಳಿಯ ಕೆ.ಎಲ್ ರಾಹುಲ್ ಅವರ ಹೆಸರಿಗೆ ಕಪ್ಪು ಚುಕ್ಕೆಯಾಗುತ್ತದೆ. ನಾನು ನನ್ನ ಮಕ್ಕಳಿಗೆ ಮತ್ತು ಸಮಾಜಕ್ಕೆ ಯಾವ ರೀತಿಯ ಪರಂಪರೆಯನ್ನು ಬಿಟ್ಟು ಹೋಗಬೇಕು ಎಂಬುದು ನನಗೆ ಮುಖ್ಯ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದಿಗೂ 17 ರಿಂದ 20 ವರ್ಷದ ಯುವಕರು ಸುನಿಲ್ ಶೆಟ್ಟಿ ಅವರ ಫಿಟ್‌ನೆಸ್ ಕಂಡು ಗೌರವ ನೀಡುತ್ತಾರೆ. ಆ ಗೌರವವನ್ನು ಹಣಕ್ಕಾಗಿ ಮಾರಿಕೊಳ್ಳಲು ಸಿದ್ಧವಿಲ್ಲದ ಶೆಟ್ಟರು, ಬಾಲಿವುಡ್‌ನ ಇತರ ನಟರಿಗೆ ಮಾದರಿಯಾಗಿದ್ದಾರೆ. ಸದ್ಯ ಅವರು ಅಕ್ಷಯ್ ಕುಮಾರ್ ಮತ್ತು ಸಂಜಯ್ ದತ್ ಜೊತೆಗೆ ‘ವೆಲ್ಕಮ್ ಟು ದಿ ಜಂಗಲ್’ ಮತ್ತು ಬಹುನಿರೀಕ್ಷಿತ ‘ಹೇರಾ ಫೇರಿ 3’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular