HomeAgricultureಬೇಸಿಗೆ ಬಂತು: ಮಾವು ಬೆಳಗಾರರಿಗೆ ಸಲಹೆಗಳು

ಬೇಸಿಗೆ ಬಂತು: ಮಾವು ಬೆಳಗಾರರಿಗೆ ಸಲಹೆಗಳು

ಹಿಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯ ಮಾವು ಬೆಳಗಾರರಿಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಕೆಲವು ಸಲಹೆಗಳನ್ನು ನೀಡಲಾಗಿದೆ.

 ಈಗ ಮಾವು ಬೆಳೆ ಹೂ ಆಡುವ ಮತ್ತು ಕಡಲೆ ಕಾಳಿನಷ್ಟು ಕಾಳು ಕಟ್ಟುವ ಹಂತದಲ್ಲಿದ್ದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಫಸಲು ಚೆನ್ನಾಗಿದೆಯಾದರೂ, ಸದ್ಯದ ವಾತಾವರಣ, ಬೆಳಗಿನ ಚಳಿ, ಅಲ್ಲಲ್ಲಿ ಮೋಡಕವಿದ ವಾತಾವರಣ ಹಾಗೂ ಅಕಾಲಿಕ ಮಳೆ ಆಗುತ್ತಿರುವುದರಿಂದ ರೋಗ ಮತ್ತು ಕೀಟಗಳ ಹಾವಳಿ ಹೆಚ್ಚಾಗಿದೆ.

ಕೆಲವು ಮುಂಜಾಗೃತ ಕ್ರಮಗಳನ್ನು ಅನುಸರಿಸಲು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ರೈತರಿಗೆ ಸಲಹೆಗಳನ್ನು ನೀಡಿದೆ. ರೈತರು ಈಗ ನೀರು ಕೊಡುವುದನ್ನು ನಿಯಮಿತವಾಗಿ ಆರಂಭಿಸಬೇಕು. ತಕ್ಷಣವೇ ಜಾಸ್ತಿ ನೀರು ಕೊಡದೆ, ದಿನವೊಂದಕ್ಕೆ ಮಣ್ಣಿನ ವಿಧ ಆಧಾರದ ಮೇಲೆ ಒಂದು ಗಂಟೆಯಿಂದ ನಾಲ್ಕು ಗಂಟೆ ನಿಧಾನವಾಗಿ ನೀರು ಕೊಡುತ್ತಿರಬೇಕು ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಗಿ ಹುಳು, ರೋಗಗಳು ಹೆಚ್ಚಾಗಿರುವುದರಿಂದ ಜೈವಿಕ ನಿಯಂತ್ರಕಗಳಾದ ಬಾವೇರಿಯ ಬೇಸಿಯಾನ ಮತ್ತು ವರ್ಟಿಸಿಲಿಯಂ ಲಕಾನಿ ಎನ್ನುವ ಉತ್ಪನ್ನಗಳನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು. ಇದರ ಜೊತೆಗೆ ಬೇವಿನ ಎಣ್ಣೆ ಒಂದರಿಂದ ಎರಡು ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹೂ ಒಣಗುವುದು ಅಥವಾ ಕಪ್ಪಾಗುವ ರೋಗದ (ಅಂಗಮಾರಿ) ಲಕ್ಷಣಗಳು ಕಂಡು ಬಂದಲ್ಲಿ 13-0 -45 ಮತ್ತು 0-52-34 ಎನ್ನುವ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಸಿಂಪಡಿಸಬೇಕು. ಹೆಕ್ಸಾಕೋನೊಜೋಲ 5% ಇ.ಸಿ. ಶಿಲೀಂದ್ರ ನಾಶಕ 1 ಮಿಲಿ ಜೊತೆಗೆ ಮೈಕ್ಲೋಬ್ಯುಟಾನಿಲ 10% ಡಬ್ಲ್ಯೂ.ಪಿ. ಎನ್ನುವ ಪುಡಿ ರೂಪದ ಶಿಲಿಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಇತರೆ ಚುಕ್ಕೆ ರೋಗ ಅಥವಾ ಅಂಗಮಾರಿ ರೋಗ ಕಂಡುಬಂದಲ್ಲಿ ಥೈಯೊಫಿನೇಟ ಮಿಥೈಲ್‌ಎನ್ನುವ 70% ಡಬ್ಲ್ಯೂ.ಪಿ. ಶಿಲೀಂದ್ರ ನಾಶಕ ಅಥವಾ ಸಂಯುಕ್ತ ಶಿಲೀಂದ್ರ ನಾಶಕವಾದ ಸಾಫ್ ಪುಡಿಯನ್ನು ಒಂದು ಗ್ರಾಂ ಅಥವಾ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೊಲವನ್ನು ಕಸದಿಂದ ಮುಕ್ತವಾಗಿಡಬೇಕು.

ಬುಡದಿಂದ ಮೂರು ಅಡಿಗಳಷ್ಟು ಎತ್ತರಕ್ಕೆ ಸಿ.ಓ.ಸಿ. 50% ಡಬ್ಲ್ಯೂ.ಪಿ. ಎಂಬ ಶೀಲಿಂದ್ರನಾಶಕ 3 ಗ್ರಾಂ ಜೊತೆಗೆ ಕ್ಲೋರೊಪೈರಿಫಾಸ ಶೇ.50 ಇ.ಸಿ. ಎನ್ನುವ ಶಿಲೀಂದ್ರ ಕೀಟನಾಶಕಗಳನ್ನು 4 ಮಿ.ಲಿ. ಮಿಶ್ರ ಮಾಡಿ ಸುಣ್ಣದಂತೆ ಲೇಪಿಸಬೇಕು. ಕಾಂಡಕೊರಕ ಕೀಟ ಕಂಡುಬಂದಲ್ಲಿ ಭಾರತೀಯ ತೋಟಗಾರಿಕೆಯ ಸಂಶೋಧನಾ ಸಂಸ್ಥೆ, ಬೆಂಗಳೂರು ಆವಿಷ್ಕರಿಸಿದ ಬೋರರ್ ಕಂಟ್ರೋಲ್ ಎನ್ನುವ ಉತ್ಪನ್ನವನ್ನು ಶಿಫಾರಸು ಮಾಡಿದಂತೆ ಕಾಂಡಕೊರಕದ ಹಾನಿಯಾದ ಜಾಗಕ್ಕೆ ಸ್ವಚ್ಛಗೊಳಿಸಿ ಲೇಪಿಸಬೇಕು.

ಇದಲ್ಲದೆ ಮಾವು ಸ್ಪೆಷಲ್ ಎನ್ನುವ ಗೊಬ್ಬರದ ಮಿಶ್ರಣವನ್ನು ಕಾಯಿಗಳು ಲಿಂಬೆ ಹಣ್ಣಿನ ಗಾತ್ರದಲ್ಲಿ ಇದ್ದಾಗ ಮತ್ತು ಒಂದು ತಿಂಗಳ ನಂತರ 5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

 ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ವಿಸ್ತರಣಾ ಮುಂದಾಳು ಡಾ. ಎಂ.ವಿ. ರವಿ (9480247745) ಮತ್ತು ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ (8217696837) ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular