HomeLatest NewsBIG NEWS: ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಬಾರದು: ನಿಮ್ಮ ಕುಟುಂಬ, ಭವಿಷ್ಯದ ಬಗ್ಗೆಯೂ ಯೋಚಿಸಿ...

BIG NEWS: ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಬಾರದು: ನಿಮ್ಮ ಕುಟುಂಬ, ಭವಿಷ್ಯದ ಬಗ್ಗೆಯೂ ಯೋಚಿಸಿ ಪೋಸ್ಟ್ ಮಾಡಿ: ಸುಮಲತಾ ಅಂಬರೀಶ್

ಮಂಡ್ಯ: ನಟಿ ರಮ್ಯಾ ಅವರಿಗೆ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಅಶ್ಲೀಲ ಕಮೆಂಟ್ ಹಿನ್ನೆಲೆಯಲ್ಲಿ ರಮ್ಯಾ ದೂರು ನೀಡಿರುವ ವಿಚಾರವಾಗಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಸುಮಲತಾ ಅಂಬರೀಶ್, ಹೆಣ್ಣು ಮಕ್ಕಳಿಗೆ ಕೆಟ್ಟ ರೀತಿಯ ಕಮೆಂಟ್ ಹಾಕಬಾರದು. ಈ ರೀತಿ ಮಾಡುವುದು ತಪ್ಪು ಎಂದು ಹೇಳಿದರು. ನಾನು ರಮ್ಯಾ ಅವರ ಸೋಷಿತ್ಯಲ್ ಮೀಡಿಯಾ ನೋಡಿಲ್ಲ. ಯಾವ ರೀತಿ ಕಮೆಂಟ್ ಯಾರು ಮಾಡಿದ್ದಾರೆ ಎಂದು ಗೊತ್ತಿಲ್ಲ. ಈ ಬಗ್ಗೆ ರಮ್ಯಾ ಪೊಲೀಸರುಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ವಿರುದ್ಧವು ಇದೇ ರೀತಿ ಟ್ರೋಲ್ ಮಾಡಲಾಯ್ತು ಆಗ ಯಾರೂ ಆ ಬಗ್ಗೆ ಮಾತನಾಡಿಲ್ಲ. ನಮಗೆ ಶಕ್ತಿಯಿದೆ ನಾವು ಎದುರಿಸುತ್ತೇವೆ. ಅದರೆ ಯಾರೂ ಈ ರೀತಿ ಕಮೆಂಟ್ ಮಾಡಬಾರದು ಎಂದರು. ಇನ್ನು ದರ್ಶನ್ ಅಭಿಮಾನಿಗಲೇ ಕಮೆಂಟ್ ಮಾಡಿದ್ದಾರೆ ಎನ್ನಲು ಆಧಾರವಿಲ್ಲ. ದರ್ಶನ್ ಅಭಿಮಾನಿಗಳೇ ಮಾಡಿದ್ದರೆ ಮನವಿ ಮಾಡುತ್ತೇನೆ. ನಿಮ್ಮ ಕುಟುಂಬ, ಭವಿಷ್ಯವನ್ನು ಯೋಚಿಸಿ ಪೋಸ್ಟ್ ಮಾಡಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular