HomeRecipiesಥಟ್ಟಂತ ತಯಾರಾಗುತ್ತೆ ಸವಿ ಸವಿ ‘ರಬ್ದಿ’

ಥಟ್ಟಂತ ತಯಾರಾಗುತ್ತೆ ಸವಿ ಸವಿ ‘ರಬ್ದಿ’

ಸಿಹಿಯಾದ ರಬ್ದಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಆದರೆ ಇದನ್ನು ಮಾಡುವುದು ತುಸು ಕಷ್ಟದ ಕೆಲಸ. ತುಂಬಾ ಸಮಯ ಹಿಡಿಯುತ್ತದೆ. ಇಲ್ಲಿ ಥಟ್ಟಂತ ಆಗುವ ರಬ್ಡಿ ಮಾಡುವ ವಿಧಾನ ಇದೆ ನೋಡಿ.

1.5 ಲೀಟರ್-ದಪ್ಪಗಿನ ಹಾಲು, 200 ಎಂ.ಎಲ್ ಕಂಡೆನ್ಸಡ್ ಮಿಲ್ಕ್, ¼ ಕಪ್- ಚಿಕ್ಕದಾಗಿ ಕತ್ತರಿಸಿದ ಡ್ರೈ ಫ್ರುಟ್ಸ್, 4-6-ಕೇಸರಿ ದಳ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಅಗಲ ತಳದ ಪಾತ್ರೆಗೆ ಹಾಲು ಹಾಕಿ ಅದು ಮುಕ್ಕಾಲು ಭಾಗವಾಗುವಷ್ಟು ಕುದಿಸಿ. ನಂತರ ಅದಕ್ಕೆ ಕಂಡೆನ್ಸಡ್ ಮಿಲ್ಕ್ , ಕೇಸರಿ ದಳ, ಡ್ರೈ ಫ್ರುಟ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಇದು ದಪ್ಪಗಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ಬೇಕಿದ್ದರೆ ಇದರ ಮೇಲೆ ತುಸು ಡ್ರೈ ಫ್ರುಟ್ಸ್ ಸೇರಿಸಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular