ವಿಶೇಷ ವರದಿ: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಕ್ಲಾಸ್‌ನಲ್ಲಿ ಫಸ್ಟ್ ಬರಬೇಕು, ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಾರೆ. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪುಸ್ತಕದ ಓದು ಮಕ್ಕಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವುದಿಲ್ಲ. ಮಕ್ಕಳ ಆಲೋಚನೆಗಳನ್ನು ಬಲಪಡಿಸಲು, ಅವರಲ್ಲಿ ಏಕಾಗ್ರತೆ ಮತ್ತು ಧೈರ್ಯ ತುಂಬಲು ನಮ್ಮ ಪುರಾತನ ಸಂಸ್ಕೃತಿಯಲ್ಲಿ ಕೆಲವು ಅದ್ಭುತ ಪವರ್ ಮಂತ್ರಗಳಿವೆ.
ಮಕ್ಕಳು ಚಿಕ್ಕವರಿರುವಾಗಲೇ ಈ ನಾಲ್ಕು ಮಂತ್ರಗಳನ್ನು ಅಭ್ಯಾಸ ಮಾಡಿಸಿದರೆ ಅವರು ಎಂತಹ ಕಷ್ಟದ ಸಂದರ್ಭದಲ್ಲೂ ಶಾಂತವಾಗಿ ಮತ್ತು ಭರವಸೆಯಿಂದ ಇರಲು ಸಾಧ್ಯವಾಗುತ್ತದೆ.
1.ಮಹಾಮೃತ್ಯುಂಜಯ ಮಂತ್ರ: ನಕಾರಾತ್ಮಕತೆಗೆ ಬ್ರೇಕ್
ಶಿವನಿಗೆ ಸಮರ್ಪಿತವಾದ ಈ ಮಂತ್ರವು ಮಂತ್ರಗಳಲ್ಲೇ ಅತ್ಯಂತ ಶಕ್ತಿಶಾಲಿ.
ಪ್ರಯೋಜನ: ಇದು ಮಕ್ಕಳಲ್ಲಿರುವ ಅನಗತ್ಯ ಭಯ ಮತ್ತು ಆತಂಕವನ್ನು ದೂರ ಮಾಡುತ್ತದೆ. ನಿರಂತರ ಪಠಣದಿಂದ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಮೂಡುತ್ತವೆ.
ಸಲಹೆ: ಮಗುವಿಗೆ ಈ ಮಂತ್ರದ ಉಚ್ಚಾರಣೆಯನ್ನು ನಿಧಾನವಾಗಿ, ಅದರ ಅರ್ಥ ತಿಳಿಯುವಂತೆ ಹೇಳಿಕೊಡಿ.
2.ಓಂ ಶ್ರೀ ಮಹಾಕಾಳಿಕಾಯೇ ನಮಃ: ಭಯಮುಕ್ತ ಬಾಲ್ಯಕ್ಕೆ ದಾರಿ
ಕೆಲವು ಮಕ್ಕಳು ಕತ್ತಲೆ ಎಂದರೆ ಅಥವಾ ಒಂಟಿಯಾಗಿರಲು ಭಯಪಡುತ್ತಾರೆ. ಅಂತಹವರಿಗೆ ಕಾಳಿ ದೇವಿಯ ಈ ಮಂತ್ರ ರಾಮಬಾಣ.
ಪ್ರಯೋಜನ: ಈ ಮಂತ್ರವು ಮಕ್ಕಳ ಸುತ್ತ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ.
ವಿಧಾನ: ಪ್ರತಿದಿನ ಕೇವಲ 3 ಬಾರಿ ಈ ಮಂತ್ರ ಪಠಿಸಿದರೆ ಮಗುವಿನಲ್ಲಿ ನನ್ನನ್ನು ರಕ್ಷಿಸಲು ಒಂದು ಶಕ್ತಿಯಿದೆ ಎಂಬ ಧೈರ್ಯ ಬರುತ್ತದೆ.
3.ಓಂ ನಮೋ ಭಗವತೇ ವಾಸುದೇವಾಯ:
ಮಾನಸಿಕ ಸಮತೋಲನಕ್ಕೆ ಸಹಕಾರಿ,ವಿಷ್ಣು ದೇವನ ಈ ಸರಳ ಮಂತ್ರವು ಮನಸ್ಸನ್ನು ಶಾಂತಗೊಳಿಸುವ ಅದ್ಭುತ ಶಕ್ತಿ ಹೊಂದಿದೆ.
ಪ್ರಯೋಜನ: ಮಕ್ಕಳು ಯಾವುದಾದರೂ ವಿಷಯಕ್ಕೆ ಅಸಮಾಧಾನಗೊಂಡಾಗ ಅಥವಾ ದುಃಖಿತರಾದಾಗ ಈ ಮಂತ್ರವು ಅವರಿಗೆ ಸಾಂತ್ವನ ನೀಡುತ್ತದೆ. ಇದು ಅವರಲ್ಲಿ ಆತ್ಮವಿಶ್ವಾಸ ಮತ್ತು ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ.
4ಹನುಮಾನ್ ಚಾಲೀಸಾ: ನಿರ್ಭಯತೆಯ ಸಂಕೇತ
ಹನುಮಂತನೆಂದರೆ ಶಕ್ತಿ ಮತ್ತು ಬುದ್ಧಿವಂತಿಕೆಯ ಸಂಗಮ. ಹನುಮಾನ್ ಚಾಲೀಸಾ ಕೇವಲ ಸ್ತೋತ್ರವಲ್ಲ, ಅದೊಂದು ಎನರ್ಜಿ ಬೂಸ್ಟರ್
ಪ್ರಯೋಜನ: ಇದನ್ನು ಪ್ರತಿದಿನ ಪಠಿಸುವ ಮಕ್ಕಳಲ್ಲಿ ಅದ್ಭುತವಾದ ಧೈರ್ಯ ಮನೆ ಮಾಡುತ್ತದೆ.
ಟಿಪ್: ಮಕ್ಕಳಿಗೆ ಹನುಮಂತನ ಸಾಹಸಗಾಥೆಗಳನ್ನು ಹೇಳುತ್ತಾ ಚಾಲೀಸಾವನ್ನು ಕಂಠಪಾಠ ಮಾಡಿಸಿ. ಇದು ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ.ಪೋಷಕರೇ, ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಗೇಮ್‌ಗಳ ಬದಲು ಇಂತಹ ದೈವಿಕ ಮಂತ್ರಗಳನ್ನು ಮಕ್ಕಳಿಗೆ ಪರಿಚಯಿಸಿ. ಇದು ಅವರ ವ್ಯಕ್ತಿತ್ವವನ್ನು ರೂಪಿಸುವುದಲ್ಲದೆ, ಮಾನಸಿಕ ಒತ್ತಡವನ್ನು ನಿಭಾಯಿಸುವ ಶಕ್ತಿಯನ್ನು ನೀಡುತ್ತದೆ. ಇದು ಮೂಢನಂಬಿಕೆಯಲ್ಲ, ಮನಸ್ಸನ್ನು ಕೇಂದ್ರೀಕರಿಸುವ ವಿಜ್ಞಾನ

