HomeKarnatakaBREAKING NEWS: ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಖಾಸಗಿ ಶಾಲಾ ಮಾಲೀಕ ಪೊಲೀಸ್ ವಶಕ್ಕೆ

BREAKING NEWS: ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಖಾಸಗಿ ಶಾಲಾ ಮಾಲೀಕ ಪೊಲೀಸ್ ವಶಕ್ಕೆ

ಬೆಂಗಳೂರು: ನಾಲ್ವರು ವಿದ್ಯಾರ್ಥಿನಿಯರ ಜೊತೆ ಖಾಸಗಿ ಶಾಲೆ ಮಾಲೀಕ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರನ ಸಂಬಂಧ ಖಾದ್ಸಗಿ ಶಾಲೆ ಮಾಲೀಕ ಈರತ್ತಯ್ಯ (50) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈರತ್ತಯ್ಯ ನಾಲ್ವರು ವಿಇದ್ಯಾರ್ಥಿನಿಯರನ್ನು ಶಾಲೆಯ ಕೊಠಡಿಗೆ ಕರೆದಿದ್ದ. ಈ ವೇಳೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿಯರು ಪೊಲೀಸರಿಗೆ ಹಾಗೂ ಬಿಇಒ ಅವರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಬೆಂಗಳೂರು ಉತ್ತರ ತಾಲೂಕು ಬಿಇಒ ತಾರಾನಾಥ್, ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದಿದ್ದಾರೆ. ಖಾಸಗಿ ಶಾಲೆಯ ಬಳಿ ಪೋಷಕರು, ವಿದ್ಯಾರ್ಥಿನಿಯರು ಮಾಲೀಕನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಖಾಸಗಿ ಶಾಲೆ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular