ಕೋಲಾರ: ಶಾಲೆಗೆಂದು ಹೋಗಿದ್ದ ಹತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ನರಸಾಪುರದಲ್ಲಿ ಘಟನೆ ನಡೆದಿದ್ದು, ಶರಣ್ಯಾ ಹಾಗೂ ದೇವಿ ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು. ಶುಕ್ರವಾರ ಬೆಳಿಗ್ಗೆ ಶಾಲೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರು ಈವರೆಗೂ ಮನೆಗೆ ಬಂದಿಲ್ಲ. ಅತ್ತ ಶಾಲೆಗೂ ಹೋಗಿಲ್ಲ.
ಇದರಿಂದ ಗಾಬರಿಯಾಗಿರುವ ಪೋಷಕರು ಕೋಲಾರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿದ್ಯಾರ್ಥಿನಿಯರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.
