HomeLatest NewsBIG NEWS: ಬೀದಿನಾಯಿಗಳ ಅಟ್ಟಹಾಸ: ಬಾಲಕ ಸೇರಿ 8 ಜನರ ಸ್ಥಿತಿ ಗಂಭೀರ; ರಿಮ್ಸ್ ಆಸ್ಪತ್ರೆಗೆ...

BIG NEWS: ಬೀದಿನಾಯಿಗಳ ಅಟ್ಟಹಾಸ: ಬಾಲಕ ಸೇರಿ 8 ಜನರ ಸ್ಥಿತಿ ಗಂಭೀರ; ರಿಮ್ಸ್ ಆಸ್ಪತ್ರೆಗೆ ದಾಖಲು

ರಾಯಚೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ರಾಯಚೂರಿನಲ್ಲಿ ಬೀದಿನಾಯಿಗಳು 15 ಜನರ ಮೇಲೆ ದಾಳಿ ನಡೆಸಿದ್ದು 8 ಜನರ ಸ್ಥಿತಿ ಗಂಭೀರವಾಗಿದೆ.

ರಾಯಚೂರು ನಗರದ ಗಂಗಾನಿವಾಸ ಹಾಗೂ ಟ್ಯಾಂಕ್ ಬಂಡ್ ಸುತ್ತಮುತ್ತ ಪ್ರದೇಶದಲ್ಲಿ ಬೀದಿನಾಯಿಗಳು ದಾಳಿ ನಡೆಸಿದ್ದು, ಓರ್ವ ಬಾಲಕ ಸೇರಿ 8 ಜನರ ಸ್ಥಿತಿ ಗಂಭೀರವಗೈವೆ. ಸಿಕ್ಕ ಸಿಕ್ಕವರ ಮೇಲೆ ಬೀದಿನಾಯಿಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹುಚ್ಚುನಾಯಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜನರು ಆತಂಕಗೊಂಡಿದ್ದಾರೆ.

ಬಾಲಕ ಸೇರಿದಂತೆ ಎಂಟು ಜನರ ಮುಖ, ಕೈ-ಕಾಲು, ಮೈ ಮೇಲೆ ನಾಯಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ. ಲಿಂಗಪ್ಪ, ಶರಣಪ್ಪ, ರಮೇಶ್, ಮೊಹಮ್ಮದ್ ಗೌಸ್ ಸೇರಿದಂತೆ ಒಟ್ಟು 15ಜನರ ಮೇಲೆ ದಾಳಿ ನಡೆಸಿದ್ದು, ಅವರಲ್ಲಿ ಗಂಭೀರವಾಗಿ ಗಾಯಗೊಂಡಿರುವ ೮ ಜನರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಯಚೂರಿನಲ್ಲಿ ಪದೇ ಪದೇ ಬೀದಿನಾಯಿಗಳು ದಾಳಿ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular