HomeHealthಒಂಟಿಯಾಗಿಯೇ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ: ಅಧ್ಯಯನ ವರದಿ

ಒಂಟಿಯಾಗಿಯೇ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ: ಅಧ್ಯಯನ ವರದಿ

ಯಾವ ಬಂಧನವೂ ಬೇಡ ಒಂಟಿಯಾಗಿಯೇ ಇರುತ್ತೇನೆ ಎಂದು ಹಲವರು ಹೇಳುತ್ತಾರೆ. ವಿದೇಶಗಳಲ್ಲಿ ಇದ್ದ ಈ ಟ್ರೆಂಡ್ ಈಗ ಭಾರತಕ್ಕೂ ಬಂದಿದೆ. ಆದರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಯುವ ಅಮೆರಿಕನ್ನರು ಪ್ರಣಯ ಸಂಬಂಧಗಳಲ್ಲಿ ತೊಡಗಿಸಿಕೊಳ್ಳುವುದು ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೆ ವಾಸ್ತವವಾದಿ ಇದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಸಂಶೋಧಕರು ಈಗ ಎಚ್ಚರಿಸಿದ್ದಾರೆ.

ಅಮೆರಿಕನ್ ಲೈಫ್‌ನ ಸರ್ವೆ ಸೆಂಟರ್‌ನ 2023ರ ಸಮೀಕ್ಷೆಯ ಪ್ರಕಾರ, ಜೆನ್ ಝಿ (Gen Z) (1997 ಮತ್ತು 2012ರ ನಡುವೆ ಜನಿಸಿದವರು) ಹದಿಹರೆಯದಲ್ಲಿ ತಾವು ಸಂಬಂಧದಲ್ಲಿದ್ದೆವು ಎಂದು ವರದಿ ಮಾಡಿರುವ ಸಂಖ್ಯೆಯು ಜೆನ್ ಎಕ್ಸ್ (Gen X)ಗಿಂತ ಶೇ. 20 ರಷ್ಟು ಮತ್ತು ಬೇಬಿ ಬೂಮರ್ಸ್ (Baby Boomers) ಗಿಂತ ಶೇ. 22 ರಷ್ಟು ಕಡಿಮೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೆ, ಅಮೆರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಬಾಯ್ಸ್ ಅಂಡ್ ಮೆನ್ ನಡೆಸಿದ 2025ರ ಅಧ್ಯಯನದ ಪ್ರಕಾರ, ಶೇ. 40ಕ್ಕಿಂತ ಹೆಚ್ಚು ಜೆನ್ ಝಿ ಪುರುಷರು ಕಳೆದ ವರ್ಷ ತಮಗೆ ಹದಿಹರೆಯದಲ್ಲಿ ಯಾವುದೇ ಸಂಬಂಧದ ಅನುಭವವಾಗಿಲ್ಲ ಎಂದು ಹೇಳಿದ್ದಾರೆ.

20,000 ಜನರನ್ನು ಇತ್ತೀಚಿಗೆ ರಾಷ್ಟ್ರೀಯ ಸಮೀಕ್ಷೆಯೊಂದಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು. ಇದು ಜೆನ್ ಝಿ ತಲೆಮಾರನ್ನು ಅತ್ಯಂತ ಒಂಟಿ ತಲೆಮಾರು ಎಂದು ಪರಿಗಣಿಸಿದೆ, ಇದು ಮಿಲೇನಿಯಲ್‌ಗಳನ್ನೂ ಹಿಂದಿಕ್ಕಿದೆ ಎಂದು ಸಮೀಕ್ಷೆ ಹೇಳಿದೆ.

ಜರ್ಮನಿ ಮತ್ತು ಯುಕೆಯ 17,000ಕ್ಕೂ ಹೆಚ್ಚು ಹದಿಹರೆಯದವರು ಮತ್ತು ಯುವ ವಯಸ್ಕರ ಹೊಸ ವಿಶ್ಲೇಷಣೆಯು, ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವ ಯಾರೇ ಆದರೂ ಹೆಚ್ಚುತ್ತಿರುವ ಒಂಟಿತನದ ಭಾವನೆ ಮತ್ತು ಜೀವನದ ತೃಪ್ತಿಯಲ್ಲಿ ಹೆಚ್ಚಿನ ಕುಸಿತವನ್ನು ಅನುಭವಿಸುತ್ತಾರೆ ಎಂದು ವಿವರಿಸಿದೆ.

ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ವಿಶ್ವವಿದ್ಯಾನಿಲಯದ ಸಂಶೋಧಕರು ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜನರ 20ರ ಹರೆಯದಲ್ಲಿ ಈ ಒಂಟಿ ತನದ ಸಮಸ್ಯೆ ಖಿನ್ನತೆಯ ಲಕ್ಷಣಗಳು ಉಲ್ಬಣಗೊಳ್ಳುವ ಸಮಯವಾಗಿದೆ ಎಂದು ಎಚ್ಚರಿಸಿದೆ.

“ಒಟ್ಟಾರೆಯಾಗಿ, ನಮ್ಮ ಸಂಶೋಧನೆಗಳು ಯುವ ವಯಸ್ಸಿನಲ್ಲಿ ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವುದು ಮಧ್ಯಮ ಮಟ್ಟದ ಅಪಾಯವನ್ನು ತಂದೊಡ್ಡುತ್ತದೆ ಎಂಬುದನ್ನು ತೋರಿಸುತ್ತವೆ” ಎಂದು ಹಿರಿಯ ಸಂಶೋಧಕರಾದ ಮೈಕೆಲ್ ಕ್ರಾಮರ್ ವಿವರಣೆ ನೀಡಿದ್ದಾರೆ.

ಶಿಕ್ಷಣದ ಸಮಸ್ಯೆ: ಸಂಶೋಧಕರು 16 ರಿಂದ 29 ವರ್ಷ ವಯಸ್ಸಿನ ಜನರ ಪ್ರತಿಕ್ರಿಯೆಗಳನ್ನು  ಸಂಗ್ರಹ ಮಾಡಿ ವರದಿ ತಯಾರು ಮಾಡಿದ್ದಾರೆ. ಪುರುಷರು, ಉನ್ನತ ಶಿಕ್ಷಣ ಪಡೆದವರು, ಪ್ರಸ್ತುತ ಕಡಿಮೆ ನೆಮ್ಮದಿಯನ್ನು ಹೊಂದಿದ್ದಾರೆ. ಒಬ್ಬಂಟಿಯಾಗಿ ಅಥವಾ ಪೋಷಕರೊಂದಿಗೆ ವಾಸಿಸುವವರು ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವ ಸಾಧ್ಯತೆ ಹೆಚ್ಚು ಎಂದು ಈ ವರದಿ ಹೇಳಿದೆ.

“ಶಿಕ್ಷಣದಂತಹ ಸಾಮಾಜಿಕ-ಜನಸಂಖ್ಯಾ ಅಂಶಗಳು ಮತ್ತು ಮಾನಸಿಕ ಗುಣಲಕ್ಷಣಗಳು, ಯಾರು ಪ್ರಣಯ ಸಂಬಂಧವನ್ನು ಬೆಳೆಸುತ್ತಾರೆ ಮತ್ತು ಯಾರು ಬೆಳೆಸುವುದಿಲ್ಲ ಎಂಬುದನ್ನು ಊಹಿಸಲು ಸಹಾಯ ಮಾಡುತ್ತದೆ ಎಂದು ನಮ್ಮ ಫಲಿತಾಂಶಗಳು ನಿರೂಪಿಸುತ್ತವೆ” ಎಂದು ಕ್ರಾಮರ್ ಹೇಳಿದ್ದಾರೆ.

ಶಿಕ್ಷಣದ ಮೇಲೆ ಹೆಚ್ಚಿನ ಗಮನ ಹರಿಸುವುದು ಮತ್ತು ಸಂಬಂಧಗಳನ್ನು ಮುಂದೂಡುವುದರ ನಡುವಿನ ಸಂಬಂಧದ ಬಗ್ಗೆ ಹಿಂದಿನ ಸಂಶೋಧನೆಗಳನ್ನು ಈ ಫಲಿತಾಂಶಗಳು ಬೆಂಬಲಿಸುತ್ತವೆ ಎಂಬುದನ್ನು ಗಮನಿಸಲಾಗಿದೆ.

ಯುವಜನರಲ್ಲಿ ಮೊದಲ ಸಂಬಂಧದ (first relationship) ಪ್ರಾಮುಖ್ಯತೆಯನ್ನು ಸಹ ಸಂಶೋಧಕರು ಕಂಡುಕೊಂಡಿದ್ದಾರೆ. ಮೊದಲ ಬಾರಿಗೆ ಸಂಗಾತಿಯನ್ನು ಹೊಂದಿದವರು ಹೆಚ್ಚಿನ ಜೀವನ ತೃಪ್ತಿಯನ್ನು ಹೊಂದಿರುವುದಾಗಿ ಮತ್ತು ಕಡಿಮೆ ಒಂಟಿತನವನ್ನು ಅನುಭವಿಸುತ್ತಾರೆ ಎಂದು ತಿಳಿಸಿದ್ದಾರೆ.

ಒಂಟಿತನದ ಸಮಸ್ಯೆ: ಒಂಟಿತನದಿಂದ ಉಂಟಾಗುವ ನಕಾರಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ವ್ಯಾಪಕವಾದ ಸಂಶೋಧನೆ ನಡೆದಿದೆ ಮತ್ತು ಈ ಕುರಿತು ಹಲವು ಆತಂಕಗಳನ್ನು ಪಟ್ಟಿ ಮಾಡಲಾಗಿದೆ.

ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಪ್ರಕಾರ, ಒಂಟಿತನವು ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ (cortisol) ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತನಾಳಗಳು, ರೋಗನಿರೋಧಕ ಶಕ್ತಿ ಮತ್ತು ಹೃದಯದ ಸಮಸ್ಯೆಗಳ ಅಪಾಯವನ್ನು ಉಂಟುಮಾಡುತ್ತದೆ.

ಒಂಟಿತನಕ್ಕೆ ಸಂಬಂಧಿಸಿದ ಇತರ ಆರೋಗ್ಯ ಅಪಾಯಗಳೆಂದರೆ ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆ, ಮಧುಮೇಹ, ಪಾರ್ಶ್ವವಾಯು, ಆತ್ಮಹತ್ಯೆ ಮತ್ತು ಅಕಾಲಿಕ ಮರಣ.

“ಒತ್ತಡವು ದೇಹದ ಮೇಲೆ ಬೀರುವ ಪರಿಣಾಮ ನಮಗೆ ತಿಳಿದಿದೆ ಮತ್ತು ಒಂಟಿತನವು ಅತ್ಯಂತ ಹೆಚ್ಚು ಒತ್ತಡವನ್ನು ನೀಡುತ್ತದೆ” ಎಂದು ಮನಶ್ಶಾಸ್ತ್ರಜ್ಞ ಡಾ. ಆಡಮ್ ಬೋರ್ಲ್ಯಾಂಡ್ ಕ್ಲಿನಿಕ್‌ಗೆ ತಿಳಿಸಿದ್ದಾರೆ.

“ನಾವು ಒಂಟಿತನವನ್ನು ಅನುಭವಿಸುತ್ತಿದ್ದರೆ, ನಾವು ನಮ್ಮ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳುವುದಿಲ್ಲ. ಇದು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು” ಎಂದು ವಿಶ್ಲೇಷಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular