HomeKarnatakaಇಂದು ರಾಜ್ಯ ಮಟ್ಟದ 'ಜನಸ್ಪಂದನಾ' ಕಾರ್ಯಕ್ರಮ : ಸಾರ್ವಜನಿಕರ ಸಮಸ್ಯೆಗೆ ಸ್ಥಳದಲ್ಲೇ ಸಿಗಲಿದೆ ಪರಿಹಾರ

ಇಂದು ರಾಜ್ಯ ಮಟ್ಟದ ‘ಜನಸ್ಪಂದನಾ’ ಕಾರ್ಯಕ್ರಮ : ಸಾರ್ವಜನಿಕರ ಸಮಸ್ಯೆಗೆ ಸ್ಥಳದಲ್ಲೇ ಸಿಗಲಿದೆ ಪರಿಹಾರ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆವರೆಗೆ  ವಿಧಾನಸೌಧದ ಮುಂಭಾಗದಲ್ಲಿ ರಾಜ್ಯ ಮಟ್ಟದ ಎರಡನೇ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಮ್ಮ ಅಹವಾಲುಗಳೊಂದಿಗೆ ಬರುವ ಜನರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಇರಲಿದೆ. ಕುಡಿಯುವ ನೀರು ಪೂರೈಕೆ, ಲಘು ಉಪಾಹಾರ ಮತ್ತು ಊಟದ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ಇಲಾಖೆಗಳ ಅರ್ಜಿ ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್‌ಗಳನ್ನು ಮಾಡಲಾಗಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜನಪರ ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಕೆಗೆ ಆನ್‌ಲೈನ್‌ ಮೂಲಕ ನೋಂದಾಯಿಸಲು 1902 ಡಯಲ್‌ ಮಾಡಿ. ವಿಧಾನಸೌಧ ಮುಂಭಾಗ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಡೆಯಲಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನಸ್ಪಂದನದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿನ ಪತ್ರಗಳಾದ ಆಧಾರ್‌ ಕಾರ್ಡ್‌ ಅಥವಾ ಪಡಿತರ ಚೀಟಿ ತರಬೇಕು ಎಂದು ಸೂಚನೆ ನೀಡಲಾಗಿದೆ.

ಸ್ಥಳ : ವಿಧಾನಸೌಧದ ಮುಂಭಾಗ

ಸಮಯ : ಬೆಳಿಗ್ಗೆ 10.00 ರಿಂದ ಸಂಜೆ 06.00 ರವರೆಗೆ

ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಇಲ್ಲಿದೆ ಪರ್ಯಾಯ ಮಾರ್ಗ

  1. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಡಿ. ದೇವರಾಜು ಅರಸು ರಸ್ತೆಯಲ್ಲಿ ಬರುವ ವಾಹನಗಳು ಎ.ಜಿ.ಎಸ್. ವೃತ್ತ ಮೂಲಕ ಎಂ.ಎಸ್. ಬಿಲ್ಡಿಂಗ್ ಒಳಭಾಗದಿಂದ ಪ್ರವೇಶಿಸಿ ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಎಡ ತಿರುವು ಪಡೆದುಕದೊಂಡು ಸಂಚರಿಸುವುದು.
  2. ಚಾಲುಕ್ಯ ವೃತ್ತದಿಂದ ಬರುವ ವಾಹನಗಳು ಸಿ.ಐ.ಡಿ. ಕಛೇರಿ ಮುಂಭಾಗವಾಗಿ ಚಲಿಸಿ ಮಹಾರಾಣಿ ಕಾಲೇಜು ಅಪ್ಪರ್ ಕ್ಯಾಂಪ್ ಮಾರ್ಗವಾಗಿ ಎಡ ತಿರುವು ಪಡೆದು ಕೆ.ಆರ್. ವೃತ್ತದಿಂದ ಅಂಬೇಡ್ಕರ್ ವೀದಿ / ಸಿಟಿ ಸಿವಿಲ್ ಕೋರ್ಟ್ ರಸ್ತೆಯನ್ನು ಉಪಯೋಗಿಸಬಹುದು.

ದಿ. 08.02.2024 ರಂದು ಬೆಳಿಗ್ಗೆ 6.00 ರಿಂದ ರಾತ್ರಿ 07-00 ರ ವರೆಗೆ ವಾಹನ ನಿಲುಗಡೆ

ನಿಷೇಧವಿರುವ ರಸ್ತೆಗಳ ವಿವರ:

  1. ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ,
  2. ರಾಜಭವನ ರಸ್ತೆ, ಪ್ಯಾಲೇಸ್ ರಸ್ತೆ,
  3. ಡಿ. ದೇವರಾಜು ಅರಸು ರಸ್ತೆ
  4. ಶೇಷಾದ್ರಿ ರಸ್ತೆ.

ದಿ. 08.02.2024 ರಂದು ಸಾರ್ವಜನಿಕ ವಾಹನ ನಿಲುಗಡೆ ಸ್ಥಳಗಳು (ಸ್ಥಳ ಲಭ್ಯತೆಯ ಮೇಲೆ/ಪಾವತಿ ನಿಲುಗಡೆ)

*ಸ್ಕೌಟ್ ಮತ್ತು ಗೈಡ್ಸ್ ಪಾರ್ಕಿಂಗ್ ಸ್ಥಳ

*ಜ್ಞಾನ ಜ್ಯೋತಿ ಮತ್ತು ಬೆಂಗಳೂರು ವಿಶ್ವವಿಧ್ಯಾಲಯ ಪಾರ್ಕಿಂಗ್ ಸ್ಥಳ.

*ಸೆಂಟ್ರಲ್ ಕಾಲೇಜ್

*ಸ್ವಾತಂತ್ರ್ಯ ಉದ್ಯಾನವನ

*ಅರಮನೆ ಮೈದಾನ ಪಾರ್ಕಿಂಗ್ ಸ್ಥಳ

For Latest News Updates, Join Our Whatsapp Community🚩
RELATED ARTICLES

Most Popular