HomeKarnatakaಜೂನ್ 14 ರಂದು ರಾಜ್ಯ ಮಟ್ಟದ ಬೃಹತ್ ಚದುರಂಗ ಸ್ಪರ್ಧೆ

ಜೂನ್ 14 ರಂದು ರಾಜ್ಯ ಮಟ್ಟದ ಬೃಹತ್ ಚದುರಂಗ ಸ್ಪರ್ಧೆ

ಕೊಪ್ಪಳ: ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 14 ರ ಭಾನುವಾರರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ವಿಶ್ವ ಚೆಸ್ ಅಕಾಡೆಮಿ(ರಿ) ಮತ್ತು ಜಿಲ್ಲಾ ಚೆಸ್ ಅಸೋಶಿಯೇಷನ್, ಕೊಪ್ಪಳ ವತಿಯಿಂದ ಬೃಹತ್ ರಾಜ್ಯ ಮಟ್ಟದ ಚದುರಂಗ  “2nd Vishwa Royal Chess Arena 2k26” ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಪಟುಗಳಿಗೆ ಅವಕಾಶವನ್ನು ಕಲ್ಪಿಸಿದ್ದು, ಪಂದ್ಯಾವಳಿಯಲ್ಲಿ ಆಸಕ್ತಿಯುಳ್ಳ ಕ್ರೀಡಾಪಟುಗಳು ಭಾಗವಹಿಸಬಹುದು. ಹಾಗೂ ಜಯಶಾಲಿಯಾಗುವ ಕ್ರೀಡಾಪಟುಗಳಿಗೆ ಒಟ್ಟು ರೂ.15,000 ನಗದು ಬಹುಮಾನ, ಆಕರ್ಷಕ ಕಪ್‌ಗಳು, ಪದಕಗಳು ಹಾಗೂ ಇ-ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಪಂದ್ಯಾವಳಿಯಲ್ಲಿ ಕಲಬುರಗಿ ಜಿಲ್ಲೆಯ ಅಂತರರಾಷ್ಟ್ರೀಯ ಆರ್ಬಿಟರ್(Chief Arbiter) ಆದ ಐಎ ಪ್ರಮೋದ್ ಜೆ. ಮೋರೆ ಅವರು ಮುಖ್ಯ ನಿರ್ಣಾಯಕರಾಗಿ ಕ್ರೀಡಾಕೂಟವನ್ನು ಮುನ್ನಡೆಸಲಿದ್ದಾರೆ.

ಪಂದ್ಯಾವಳಿಯಲ್ಲಿ ರಾಜ್ಯದ 3 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಚದುರಂಗ ಆಟಗಾರರು ಭಾಗವಹಿಸಬಹುದು. ಪಂದ್ಯದಲ್ಲಿ ಒಟ್ಟು 7 ಸುತ್ತುಗಳಿರುತ್ತವೆ. ಸಮಯದ ನಿಯಂತ್ರಣ 15 ನಿಮಿಷ(5 ಸೆಕೆಂಡ್ ಹೆಚ್ಚುವರಿ ಪ್ರತಿ ನಡೆಗೆ). ವಯೋಮಿತಿ ವಿಭಾಗಗಳು U-10, U-13, U-16 ಮತ್ತು Open ವಿಭಾಗಗಳು(ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಿಭಾಗ) ಆಗಿರುತ್ತವೆ. ವಿಶೇಷ ಬಹುಮಾನಗಳಾಗಿ ಬೆಸ್ಟ್ ಕೊಪ್ಪಳ ಪ್ಲೇಯರ್, ಬೆಸ್ಟ್ ಫೀಮೇಲ್ ಪ್ಲೇಯರ್ (17ವರ್ಷ ಮೇಲ್ಪಟ್ಟವರಿಗೆ), ಬೆಸ್ಟ್ ಯಂಗೆಸ್ಟ್ ಪ್ಲೇಯರ್, ಬೆಸ್ಟ್ ವೆಟರನ್ ಪ್ಲೇಯರ್(50ವರ್ಷ ಮೇಲ್ಪಟ್ಟವರಿಗೆ) ಹಾಗೂ ಬೆಸ್ಟ್ ವಿಶ್ವ ಚೆಸ್ ಅಕಾಡೆಮಿ ಪ್ಲೇಯರ್ಸ್ ಪ್ರಶಸ್ತಿಗಳನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ ಆಟಗಾರರಿಗೆ ಹಾಗೂ ಪೋಷಕರಿಗೆ ಉಚಿತ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೋಂದಣಿ ಶುಲ್ಕ ರೂ.500 ಆಗಿದ್ದು, ಕೆಎಸ್‌ಸಿಎ ನೋಂದಣಿ ಕಡ್ಡಾಯವಾಗಿರುತ್ತದೆ. ಜೂನ್ 13 ನೋಂದಣಿಗೆ ಕೊನೆಯ ದಿನವಾಗಿದೆ. ಶುಲ್ಕ ಪಾವತಿ ಮತ್ತು ಪ್ರವೇಶ ಖಚಿತಪಡಿಸಲು ಮೊ.ಸಂ: 8867558702, 9113889338 ಇವರನ್ನು ಹಾಗೂ FIDE ID ಸಲ್ಲಿಕೆ ಹಾಗೂ ತಾಂತ್ರಿಕ ವಿವರಗಳಿಗಾಗಿ ಮೊ.ಸಂ.: 8904348309 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular