ಬೆಂಗಳೂರು : ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ಆರು ಮಂದಿ ತಹಶೀಲ್ದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ತಹಶೀಲ್ದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. ವರ್ಗಾವಣೆಯಾದ ಅಧಿಕಾರಿಗಳ ವಿವರಗಳು ಹೀಗಿವೆ
| ಕ್ರ.ಸಂ. | ಅಧಿಕಾರಿಯ ಹೆಸರು | ವರ್ಗಾಯಿಸಲಾದ/ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆ/ಸ್ಥಳ |
| 1 | ಪೃಥ್ವಿ ಸಾನಿಕಂ | ತಹಶೀಲ್ದಾರ್ ಗ್ರೇಡ್-1, ಮುಲ್ಕಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ (ಖಾಲಿ ಹುದ್ದೆಗೆ) |
| 2 | ಹಣಮಂತ ಶಿರಹಟ್ಟಿ | ತಹಶೀಲ್ದಾರ್ ಗ್ರೇಡ್-1, ಬೆಳಗಾವಿ ತಾಲ್ಲೂಕು, ಬೆಳಗಾವಿ ಜಿಲ್ಲೆ (ಶ್ರೀ ಬಸವರಾಜ ನಾಗರಾಳ ಇವರ ಸ್ಥಳಕ್ಕೆ) |
| 3 | ಸಚ್ಚಿದಾನಂದ ಸತ್ಯಪ್ಪ ಕುಚನೂರ | ತಹಶೀಲ್ದಾರ್ ಗ್ರೇಡ್-1, ಧಾರವಾಡ ತಾಲ್ಲೂಕು, ಧಾರವಾಡ ಜಿಲ್ಲೆ (ಶ್ರೀ ದೊಡ್ಡಪ್ಪ ಹೂಗಾರ ಇವರ ಸ್ಥಳಕ್ಕೆ) |
| 4 | ಎಂ.ಆರ್. ಕುಲಕರ್ಣಿ | ತಹಶೀಲ್ದಾರ್ ಗ್ರೇಡ್-1, ಯಲ್ಲಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ (ಖಾಲಿ ಹುದ್ದೆಗೆ) |
| 5 | ಡಾ | |
| 6 | ಎಸ್.ಎ. ಪ್ರಸಾದ್ | ತಹಶೀಲ್ದಾರ್ ಗ್ರೇಡ್-1, ಮುಂಡಗೋಡ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ (ಶ್ರೀ ಶಂಕರಗೌಡ ಇವರ ಸ್ಥಳಕ್ಕೆ) |






