HomeBusinessಗಮನಿಸಿ: SBI ಗ್ರಾಹಕರಿಗೆ ಉಚಿತವಾಗಿ ಸಿಗುತ್ತೆ ಈ 10 ಸೇವೆ...! ಇಲ್ಲಿದೆ ವಿವರ

ಗಮನಿಸಿ: SBI ಗ್ರಾಹಕರಿಗೆ ಉಚಿತವಾಗಿ ಸಿಗುತ್ತೆ ಈ 10 ಸೇವೆ…! ಇಲ್ಲಿದೆ ವಿವರ

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ತನ್ನ ಗ್ರಾಹಕರಿಗೆ ಮೊಬೈಲ್ ಮೂಲಕವೇ ಪಡೆಯಬಹುದಾದ ಅನೇಕ ಸೇವೆಗಳನ್ನು ಉಚಿತವಾಗಿ ಕೊಡಮಾಡುತ್ತಿದೆ.

ಎಸ್‌ಬಿಐ ಕ್ವಿಕ್ – ಮಿಸ್ಡ್‌ ಕಾಲ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಅಕೌಂಟ್ ಬ್ಯಾಲೆಕ್ಸ್‌, ಮಿನಿ ಸ್ಟೇಟ್ಮೆಂಟ್ ಸೇರಿದಂತೆ ಅನೇಕ ವಿಚಾರಗಳನ್ನು ನಿಮ್ಮ ನೋಂದಾಯಿತ ಮೊಬೈಲ್‌ನಿಂದ ಎಸ್‌ಎಂಎಸ್ ಕಳಿಸುವ ಮೂಲಕ ಪಡೆಯಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಬೈಲ್ ಫೋನ್ ಮೂಲಕ ಎಸ್‌ಬಿಐ ಗ್ರಾಹಕರು ಉಚಿತವಾಗಿ ಪಡೆಯಬಹುದಾದ ಸೇವೆಗಳ ಪಟ್ಟಿ ಇಂತಿದೆ:

ಬ್ಯಾಲೆನ್ಸ್ ವಿಚಾರಣೆ

919223766666ಗೆ ಮಿಸ್ಡ್‌ ಕಾಲ್ ಅಥವಾ ‘BAL’ ಎಂದು ಎಸ್‌ಎಂಎಸ್ ಮಾಡಬೇಕು.

ಮಿನಿ ಸ್ಟೇಟ್ಮೆಂಟ್

919223766666ಗೆ ಮಿಸ್ಡ್‌ ಕಾಲ್ ಅಥವಾ ‘MSTMT’ ಎಂದು ಎಸ್‌ಎಂಎಸ್ ಮಾಡಬೇಕು.

ಚೆಕ್ ಬುಕ್ ವಿನಂತಿಯ ಸ್ವೀಕೃತಿ

917208933145ಗೆ “CHQREQ” ಎಂದು ಎಸ್‌ಎಂಎಸ್ ಮಾಡಬೇಕು.

ಚೆಕ್‌ಬುಕ್ ವಿನಂತಿ

917208933145ಗೆ “CHQREQ” ಎಂದು ಎಸ್‌ಎಂಎಸ್ ಮಾಡಬೇಕು.

ಕಳೆದ ಆರು ತಿಂಗಳ ಇ-ಸ್ಟೇಟ್ಮೆಂಟ್

ಕಳೆದ ಆರು ತಿಂಗಳ ಇ-ಸ್ಟೇಟ್ಮೆಂಟ್‌ ಅನ್ನು ನಿಮ್ಮ ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಪಾಸ್‌ವರ್ಡ್ ರಕ್ಷಿತ ಪಿಡಿಎಫ್ ಫೈಲ್ ಮೂಲಕ ಕಳುಹಿಸಲಾಗುವುದು. ಇದಕ್ಕಾಗಿ ನೀವು ‘ESTMT <ಸ್ಪೇಸ್> <ಖಾತೆ ಸಂಖ್ಯೆ> <ಸ್ಪೇಸ್> <ಕೋಡ್> ಎಂದು 917208933145ಗೆ ಎಸ್‌ಎಂಎಸ್‌ ಮಾಡಬೇಕು.

ಶಿಕ್ಷಣ ಸಾಲದ ಬಡ್ಡಿಯ ಪ್ರಮಾಣ ಪತ್ರ

917208933145ಗೆ ELI <ಸ್ಪೇಸ್> <ಖಾತೆ ಸಂಖ್ಯೆ> <ಸ್ಪೇಸ್> <ಕೋಡ್> ಎಂದು ಎಸ್‌ಎಂಎಸ್ ಮಾಡಬೇಕು.

ಮನೆ ಸಾಲ ಬಡ್ಡಿ ಪ್ರಮಾಣ ಪತ್ರ

917208933145ಗೆ HLI <ಸ್ಪೇಸ್> <ಖಾತೆ ಸಂಖ್ಯೆ> <ಸ್ಪೇಸ್> <ಕೋಡ್> ಎಂದು ಎಸ್‌ಎಂಎಸ್ ಮಾಡಬೇಕು.

ಸಕಾರಾತ್ಮಕ ಪಾವತಿ ವ್ಯವಸ್ಥೆಗೆ (ಪಿಪಿಎಸ್‌) ನೋಂದಾಯಿತರಾಗಲು

ಈ ವ್ಯವಸ್ಥೆಯನ್ನು ಬಳಸಲು ಮೊದಲಿಗೆ ’ಒನ್ ಟೈಂ’ನೋಂದಣಿಯಾಗಬೇಕು. ಬಳಿಕ ಮೊಬೈಲ್ ಮೂಲಕ ಪಿಪಿಎಸ್‌ ಸೇವೆಗಳನ್ನು ಪಡೆಯಬಹುದು.

ಸೇವೆಗಳ ಪೂರ್ಣ ಪಟ್ಟಿ

“917208933145”ಗೆ “HELP” ಎಂದು ಎಸ್‌ಎಂಎಸ್ ಮಾಡಬೇಕು.

ಭಾಷೆ ಬದಲಾವಣೆಗೆ

917208933148 ಗೆ ಹಿಂದಿ ಅಥವಾ ಇಂಗ್ಲಿಷ್ ಎಂದು, ಇಚ್ಛೆಯ ಭಾಷೆಯನ್ನು ಟೈಪ್ ಮಾಡಿ ಕಳುಹಿಸಬೇಕು.

ಈ ಸೇವೆಗಳನ್ನು ಪಡೆಯಲು ನಿಮ್ಮ ಖಾತೆಯ ವಿವರಗಳಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿ, ಎಸ್‌ಬಿಐ ಕ್ವಿಕ್ ಸೇವೆಗೆ ನೋಂದಣಿಯಾಗಬೇಕಾಗುತ್ತದೆ. ಆಂಡ್ರಾಯ್ಡ್ ಅಥವಾ ಐಓಎಸ್ ಅಥವಾ ಬ್ಲಾಕ್‌ಬೆರ‍್ರಿ ಫೋನ್‌ಗಳಲ್ಲಿ ಎಸ್‌ಬಿಐ ಕ್ವಿಕ್ ಅಪ್ಲಿಕೇಶನ್‌ ಡೌನ್ಲೋಡ್ ಮಾಡಿಕೊಳ್ಳಬಹುದು.

ಎಸ್‌ಬಿಐ ಮೂಲಕ ಎಲ್ಲಾ ಸಂಪರ್ಕಗಳು ಎಸ್‌ಎಂಎಸ್ ಅಥವಾ ಮಿಸ್ಡ್‌ ಕಾಲ್‌ಗಳ ಮೂಲಕ ಆಗುವ ಕಾರಣ ಒಮ್ಮೆ ಅಳವಡಿಸಿಕೊಂಡ ಬಳಿಕ ಅಂತರ್ಜಾಲದ ಸಂಪರ್ಕ ಬೇಕಾಗುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular