HomeKarnatakaಕಾಶಿ-ಅಯೋಧ್ಯಾ ಯಾತ್ರೆ ರದ್ದುಗೊಳಿಸಿದ `ಸ್ಟಾರ್ ಏರಲೈನ್ಸ್' ಗೆ 8 ಲಕ್ಷ 10 ಸಾವಿರ ರೂ.ಗಳ ದಂಡ!

ಕಾಶಿ-ಅಯೋಧ್ಯಾ ಯಾತ್ರೆ ರದ್ದುಗೊಳಿಸಿದ `ಸ್ಟಾರ್ ಏರಲೈನ್ಸ್’ ಗೆ 8 ಲಕ್ಷ 10 ಸಾವಿರ ರೂ.ಗಳ ದಂಡ!

ಧಾರವಾಡ : ಕಾಶಿ-ಅಯೋಧ್ಯಾ ಯಾತ್ರೆ ರದ್ದುಗೊಳಿಸಿದ ಸ್ಟಾರ್‍ ಏರಲೈನ್ಸ್‍ಗೆ ಗ್ರಾಹಕರ ಆಯೋಗವು ಬರೋಬ್ಬರಿ 8 ಲಕ್ಷ 10 ಸಾವಿರ ರೂ.ಗಳ ದಂಡ-ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.

ಧಾರವಾಡದ ಮಹಿಳಾ ವಕೀಲರಾದ ಶ್ರೀಮತಿ ಮಹೇಶ್ವರಿ ಉಪ್ಪಿನ (ದೇಸಾಯಿ) ಮತ್ತು ಅವರ 26 ಸಂಗಡಿಗರು ಹುಬ್ಬಳ್ಳಿಯ ಸುರಕ್ಷಾಟೂರ್ಸ್‍ರವರ ಮೂಲಕ 09/10/2022 ರಿಂದ 19/10/2020 ರವರೆಗೆ ದೆಹಲಿ, ಹರಿದ್ವಾರ, ಅಯೋಧ್ಯೆ, ಕಾಶಿ, ಪ್ರಯಾಗರಾಜ, ಮಥುರಾ ಸೇರಿ ಉತ್ತರ ಭಾರತದ ಪ್ರವಾಸ ನಿಗದಿ ಮಾಡಿಕೊಂಡಿದ್ದರು.ದೆಹಲಿಯಿಂದ ಹೊರಟು ಆ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿಕೊಂಡು ವಾಪಸ್ಸು ದೆಹಲಿಗೆ ಕರೆತರುವ ಜವಾಬ್ದಾರಿ ಹುಬ್ಬಳ್ಳಿಯ ಸುರಕ್ಷಾಟೂರ್ಸ್ ಮತ್ತುಟ್ರಾವಲ್ಸ್ ನವರದಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

  ಆ ಬಗ್ಗೆ ಎಲ್ಲ ಪ್ರವಾಸಿಗರೂ ಸುರಕ್ಷಾಟೂರ್ಸ್ ಮಾಲೀಕ ಸುನೀಲ ತೊಗರಿಯವರಿಗೆ ಅಂದಾಜು ತಲಾ ರೂ.21,000/- ಯಂತೆ  ಹಣ ಸಂದಾಯ ಮಾಡಿದ್ದರು.  ಹುಬ್ಬಳ್ಳಿಯಿಂದ ದೆಹಲಿU Éತಲುಪಲು ಎಲ್ಲ 27 ಜನ ಪ್ರವಾಸಿಗರು ಜೂನ್-2022 ರಲ್ಲಿ ಸ್ಟಾರ್‍ಏರಲೈನ್‍ಮೂಲಕ ಟಿಕೇಟ್ ಬುಕ್ ಮಾಡಿದ್ದರು. ದಿ:9/10/2022 ರಂದುತಮ್ಮ ಪ್ರಯಾಣಕ್ಕೆ ಎಲ್ಲ ಪ್ರವಾಸಿಗರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸಡನ್ನಾಗಿ ದಿ:09/10/2022 ರಂದು ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದ ಸ್ಟಾರ್‍ಏರಲೈನ್ಸ್‍ರದ್ಧಾಗಿರುವುದಾಗಿ ಸಂಗಡಿಗರಿಗೆ ಮಾಹಿತಿ ಬಂತು. ಸದರಿ ಸ್ಟಾರ್‍ಏರಲೈನ್ಸ್‍ರವರುದೆಹಲಿಗೆ ಹೋಗಲು ಬೇರೆ ವ್ಯವಸ್ಥೆ ಮಾಡಿರಲಿಲ.್ಲ ಹಾಗಾಗಿ ಸುರಕ್ಷಾಟೂರ್ಸಿನ ಮಾಲೀಕ ಸುನೀಲ ತೊಗರಿತನ್ನಖರ್ಚು ಹಾಕಿ ಬೇರೆ ಬೇರೆ ಮಾರ್ಗಗಳ ಮೂಲಕ ದಿ:09/10/2022ರ ರಾತಿ ಎಲ್ಲ ದೂರುದಾರರು/ಪ್ರವಾಸಿಗರಿಗೆ ದೆಹಲಿ ತಲುಪುವ ವ್ಯವಸ್ಥೆ ಮಾಡಿದರು. ದೆಹಲಿಯಿಂದ ಎಲ್ಲ ಕಡೆ ಸುತ್ತಾಡಿ ಪೂರ್ವ ನಿಗದಿತಕಾರ್ಯಕ್ರಮದಂತೆ ಸುರಕ್ಷಾಟೂರ್ಸ್‍ನವರುಎಲ್ಲ ಪ್ರವಾಸಿಗರನ್ನು ವಾಪಸ್ಸು ಹುಬ್ಬಳ್ಳಿಗೆ ಕರೆತಂದು ಬಿಟ್ಟರು.

ದಿ:09/10/2022 ರಂದು ತಮ್ಮ ಪ್ರಯಾಣಕ್ಕೆ ಜೂನ್ ತಿಂಗಳಲ್ಲೇ ಟಿಕೇಟ್ ನಿಗದಿಯಾಗಿದ್ದರೂ ಪ್ರಯಾಣದ ಹಿಂದಿನ ದಿವಸ ಸ್ಟಾರ್ ಏರಲೈನ್ಸ್ ಸಡನ್ನಾಗಿ ರದ್ದುಪಡಿಸಿದ್ದರಿಂದ ತಮಗೆ ಅನಾನುಕೂವಾಯಿತು ಹಾಗೂ ಅದರಿಂದ ಮಾನಸಿಕ ತೊಂದರೆಯಾಯಿತು ಕಾರಣ ಅವರೆಲ್ಲರೂ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಸುರಕ್ಷಾಟೂರ್ಸ್ ಮತ್ತು ಸ್ಟಾರ್‍ಏರಲೈನ್ಸ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ 27 ಜನ ದೂರುದಾರರು ಗ್ರಾಹಕರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆದಿ:01/02/2023 ರಂದುದೂರನ್ನು ಸಲ್ಲಿಸಿದ್ದರು.

ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ.ಈಶಪ್ಪ.ಭೂತೆ ಹಾಗೂ  ಸದಸ್ಯರಾದ  ವಿಶಾಲಾಕ್ಷಿ  ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ದಿ:09/10/2022ರ ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣಿಸುವ ವಿಮಾನವನ್ನು ಸ್ಟಾರ್‍ಏರಲೈನ್ಸ್‍ರವರು ಸಡನ್ನಾಗಿ ರದ್ದುಪಡಿಸಿದ್ದರೂ ಸುರಕ್ಷಾಟೂರ್ಸನ ಮಾಲೀಕ ಸುನೀಲ ತೊಗರಿ ಶ್ರಮ ವಹಿಸಿ ತನ್ನದೇ ಹಣಖರ್ಚು ಮಾಡಿ ಹೈದರಾಬಾದ್ ಮೂಲಕ ಕೆಲವು ದೂರುದಾರರಿಗೆ, ಮುಂಬೈ ಮೂಲಕ ಕೆಲವು ದೂರುದಾರರಿಗೆ ವಿಮಾನ ಮೂಲಕ ಬೇರೆ ವ್ಯವಸ್ಥೆ ಮಾಡಿ ಎಲ ್ಲದೂರುದಾರರು ನಿಗದಿತ ಸಮಯಕ್ಕೆ ದೆಹಲಿ ತಲುಪುವಂತೆ ಮಾಡಿದ್ದಾರೆ. ದೆಹಲಿಯಿಂದ ಎಲ್ಲ ಪ್ರವಾಸಿ ತಾಣಗಳನ್ನು ತೋರಿಸಿ ನಿಗದಿತ ಕಾರ್ಯಕ್ರಮದಂತೆ ದಿ:19/10/2022 ರಂದು ಎಲ್ಲ ದೂರುದಾರರನ್ನು ಹುಬ್ಬಳ್ಳಿಗೆ ಕರೆತಂದಿರುವುದರಿಂದ ಹುಬ್ಬಳ್ಳಿಯ ಸುರಕ್ಷಾಟೂರ್ಸ್ ನವರದುಯಾವುದೇರೀತಿ ಸೇವಾ ನ್ಯೂನ್ಯತೆ ಆಗಿಲ್ಲ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಹುಬ್ಬಳ್ಳಿಯಿಂದ ದೆಹಲಿಗೆಕರೆದೊಯ್ಯುವ ಹೊಣೆಗಾರಿಕೆ ತನ್ನದಲ್ಲದಿದ್ದರೂ ಸುರಕ್ಷಾಟೂರ್ಸ್‍ನ ಮಾಲೀಕ ಸುನೀಲ ತೊಗರಿ ತನ್ನ ಗ್ರಾಹಕರಿಗೆ ತೊಂದರೆ ಆಗಬಾರದು ಅಂತಾ ಪರ್ಯಾಯ ವ್ಯವಸ್ಥೆ ಮಾಡಿರುವುದು ಪ್ರಶಂಸನೀಯ ಅಂತಾ ಅವರ ನಡಾವಳಿಕೆಗೆ ಆಯೋಗ ಮೆಚ್ಚಿಗೆ ವ್ಯಕ್ತಪಡಿಸಿದೆ.

ಆದರೆ ಸಡನ್ನಾಗಿ ವಿಮಾನ ರದ್ದುಪಡಿಸಿ ಪ್ರವಾಸಿಗರಿಗೆ ಬೇರೆ ವ್ಯವಸ್ಥೆ ಮಾಡದೇ ಇರುವುದರಿಂದ ಸ್ಟಾರ್‍ಏರಲೈನ್ಸ್‍ರವರು ಎಲ್ಲ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದ ುಆಯೋಗ ತನ್ನತೀರ್ಪಿನಲಿ ್ಲಅಭಿಪ್ರಾಯ ಪಟ್ಟಿದೆ.

ಅದರಿಂದದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಸ್ಟಾರ್‍ಏರಲೈನ್ಸ್‍ರವರು ಎಲ್ಲ 27 ದೂರುದಾರರಿಗೆ ತಲಾ ರೂ.25,000/-ಗಳನ್ನು ಪರಿಹಾರ ಮತ್ತು ರೂ.5,000/-ಗಳನ್ನು ಪ್ರಕರಣದ ನಡೆಸಿದ ಖರ್ಚು ವೆಚ್ಚ ಅಂತಾ ಒಟ್ಟು ರೂ.8,10,000/-ಗಳನ್ನುತೀರ್ಪು ನೀಡಿದ ಒಂದ ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಸ್ಟಾರ್‍ಏರಲೈನ್ಸ್‍ರವರಿಗೆ ನಿರ್ದೇಶನ ನೀಡಿದೆ. ಸಡನ್ನಾಗಿ ವಿಮಾನ ರದ್ದಾಗಿ ತಕ್ಷಣ ಬೇರೆ ವಿಮಾನ ವ್ಯವಸ್ಥೆ ಮಾಡಿದ್ದರಿಂದ ತಾನು ರೂ.1,66,823/-ಗಳನ್ನು ಹೆಚ್ಚಿಗೆ ಖರ್ಚು ಮಾಡಿದ್ದೇನೆ ಅನ್ನುವ ಸುರಕ್ಷಾಟೂರ್ಸ್‍ನ ಮಾಲೀಕ ಸುನೀಲ ತೊಗರಿಯವರ ಬೇಡಿಕೆಯನ್ನು ಆಯೋಗ ಪುರಸ್ಕರಿಸಿದೆ. ಆ ಹಣ ರೂ.1,66,823/-ಗಳನ್ನು ಒಂದು ತಿಂಗಳ ಒಳಗಾಗಿ ಸುರಕ್ಷಾಟೂರ್ಸ್ ನವರಿಗೆಕೊಡುವಂತೆ ಸ್ಟಾರ್‍ಏರಲೈನ್ಸ್   ನವರಿಗೆಆಯೋಗ ತಿಳಿಸಿದೆ. ತೀರ್ಪು ನೀಡಿದಒಂದು ತಿಂಗಳ ಒಳಗಾಗಿ ಮೇಲೆ ಹೇಳಿದ ಹಣ ಸ್ಟಾರ್‍ಏರಲೈನ್ಸ್  ನವರುಕೊಡದೇಇದ್ದಲ್ಲಿ ಆ ಎಲ್ಲ ಹಣದ ಮೇಲೆ ಈ ತೀರ್ಪು ನೀಡಿದ ದಿನಾಂಕದಿಂದ ಶೆ8% ರಂತೆ ಬಡ್ಡಿಕೊಡಲು ಆದೇಶಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular