HomeLatest NewsBIG NEWS: ಕಾಲ್ತುಳಿತ ದುರಂತ: ವರದಿ ನೀಡುವಂತೆ ಜಸ್ಟೀಸ್ ಕುನ್ಹಾ ಆಯೋಗಕ್ಕೆ ಸರ್ಕಾರ ಸೂಚನೆ

BIG NEWS: ಕಾಲ್ತುಳಿತ ದುರಂತ: ವರದಿ ನೀಡುವಂತೆ ಜಸ್ಟೀಸ್ ಕುನ್ಹಾ ಆಯೋಗಕ್ಕೆ ಸರ್ಕಾರ ಸೂಚನೆ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಆರ್ ಸಿಬಿ ಅಭಿಮಾನಿಗಳು ಸಾವು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಕುನ್ಹಾ ನೇತೃತ್ವದ ಆಯೋಗಕ್ಕೆ ವಹಿಸಿದ್ದು, ಘಟನೆ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಜಸ್ಟಿಸ್ ಕುನ್ಹಾ ಆಯೋಗ ಸದ್ಯ ಚಾಮರಾಜನಗರದ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದೆ. ಅದಕ್ಕೂ ಮುನ್ನ ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಬಳಿಕ ಚಾಮರಾಜನಗರದ ಆಕ್ಸಿಜನ್ ದುರಂತದ ಬಗ್ಗೆ ಪರಿಶೀಲಿಸುವಂತೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಆಗಸ್ಟ್ 31ವರೆಗೆ ಕುನ್ಹಾ ಆಯೋಗದ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular