HomeKarnatakaBIG NEWS: ರಾಜ್ಯಾದ್ಯಂತ SSLC ಅರ್ಧವಾರ್ಷಿಕ ಪರೀಕ್ಷೆಗೂ ಏಕರೂಪದ ಪ್ರಶ್ನೆಪತ್ರಿಕೆ: ಸೆ. 24ರಿಂದ ಪ್ರಿಪರೇಟರಿ ಮಾದರಿ...

BIG NEWS: ರಾಜ್ಯಾದ್ಯಂತ SSLC ಅರ್ಧವಾರ್ಷಿಕ ಪರೀಕ್ಷೆಗೂ ಏಕರೂಪದ ಪ್ರಶ್ನೆಪತ್ರಿಕೆ: ಸೆ. 24ರಿಂದ ಪ್ರಿಪರೇಟರಿ ಮಾದರಿ ಪರೀಕ್ಷೆ

ಬೆಂಗಳೂರು: ರಾಜ್ಯ ಪಠ್ಯಕ್ರಮದ ಎಲ್ಲಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಿಂದ ಅರ್ಧ ವಾರ್ಷಿಕ ಪರೀಕ್ಷೆಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡುವ ಏಕರೂಪ ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕಿದೆ.

ಮೌಲ್ಯಮಾಪನ ಪ್ರಕ್ರಿಯೆ ಆಯಾ ಶಾಲೆಗಳಲ್ಲಿಯೇ ನಡೆಯಲಿದೆ. ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಶಾಲಾ ಹಂತದ ಬದಲು ತಾನೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮಂಡಳಿ ನೀಡಲಾರಂಭಿಸಿದೆ. ಈ ಸಾಲಿನಿಂದ ಸರ್ಕಾರದ ನಿರ್ದೇಶನದಂತೆ ಅರ್ಧವಾರ್ಷಿಕ ಪರೀಕ್ಷೆಗೂ ಸಂಕಲನಾತ್ಮಕ ಮೌಲ್ಯಮಾಪನ-1 ರಾಜ್ಯದಾತ್ಯಂತ ಏಕರೂಪದ ಪ್ರಶ್ನೆ ಪತ್ರಿಕೆ ನೀಡಲು ತೀರ್ಮಾನಿಸಲಾಗಿದೆ.

ಪ್ರಕಟಿಸಲಾದ ವೇಳಾಪಟ್ಟಿಯಂತೆ ಸೆ. 24 ರಿಂದ ಅ.1ರವರೆಗೆ ಎಸ್ಎಸ್ಎಲ್ಸಿ ಮಧ್ಯ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಮಂಡಳಿಯಿಂದ ನೀಡುವ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಬೇಕಿದೆ. ಕಳೆದ ಸಾಲಿನಿಂದ ಪೂರ್ವ ಸಿದ್ಧತಾ ಪರೀಕ್ಷೆಗೆ ಮಂಡಳಿಯೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಈ ಸಾಲಿನಿಂದ ಅರ್ಧ ವಾರ್ಷಿಕ ಪರೀಕ್ಷೆಗೂ ಅದನ್ನು ವಿಸ್ತರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular