HomeIndiaಪಾಕಿಸ್ತಾನ, ರಾಜಸ್ಥಾನ ಬಳಿಕ ಶ್ರೀಲಂಕಾ ಸರದಿ; ಫೇಸ್ ಬುಕ್ ಗೆಳಯನಿಗಾಗಿ ಲಂಕಾ ಬಿಟ್ಟು ಬಂದು ಚಿತ್ತೂರು...

ಪಾಕಿಸ್ತಾನ, ರಾಜಸ್ಥಾನ ಬಳಿಕ ಶ್ರೀಲಂಕಾ ಸರದಿ; ಫೇಸ್ ಬುಕ್ ಗೆಳಯನಿಗಾಗಿ ಲಂಕಾ ಬಿಟ್ಟು ಬಂದು ಚಿತ್ತೂರು ಯುವಕನ ವರಿಸಿದ ಯುವತಿ; ಪೊಲೀಸರಿಂದ ನೋಟಿಸ್

ಹೈದರಾಬಾದ್: ಫೇಸ್ ಬುಕ್ ಗೆಳೆಯನಿಗಾಗಿ ವಿವಾಹಿತ ಮಹಿಳೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದು, ರಾಜಸ್ಥಾನದ ಮಹಿಳೆ ಪಾಕಿಸ್ತಾನಕ್ಕೆ ಹೋಗಿರುವ ಘಟನೆಗಳ ಬೆನ್ನಲ್ಲೇ ಈಗ ಶ್ರೀಲಂಕಾ ಸರದಿ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯನಾದ ಗೆಳೆಯನಿಗಾಗಿ ಶ್ರೀಲಂಕಾವನ್ನೇ ತೊರೆದು ಆಂಧ್ರಪ್ರದೇಶಕ್ಕೆ ಯುವತಿಯೊಬ್ಬಳು ಬಂದಿದ್ದು, ಆತನನ್ನೇ ವರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್ ಭಾರತಕ್ಕೆ ಬಂದಿದ್ದು, ರಾಜಸ್ಥಾನದ ಎರಡು ಮಕ್ಕಳ ತಾಯಿ ಲಾಹೋರ್ ಗೆ ತೆರಳಿರುವ ಘಟನೆಗಳ ಮಧ್ಯೆ ಲಂಕಾ ಯುವತಿಯೊಬ್ಬಳು ಆಂಧ್ರದ ಚಿತ್ತೂರಿಗೆ ಆಗಮಿಸಿದ್ದಾಳೆ. ಶ್ರೀಲಂಕಾದ ಯುವತಿಯ 7 ವರ್ಷಗಳ ಲವ್ ಸ್ಟೋರಿ ವಿವಾಹ ಬಂಧನದಲ್ಲಿ ಸಿಲುಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಂಕಾದ ವಿಘ್ನೇಶ್ವರಿ ಎಂಬ ಯುವತಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಂಧ್ರದ ಚಿತ್ತೂರು ಮೂಲದ ಲಕ್ಷ್ಮಣ್ ಪರಿಚಯವಾಗಿದೆ. ಪರಿಚಯ, ಸ್ನೇಹವಾಗಿ ಪ್ರೀತಿಗೆ ತಿರುಗಿದ್ದು, 7 ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರಂತೆ. ಈಗ ಎರಡು ಕುಟುಂಬದವರ ಒಪ್ಪಿಗೆ ಮೇರೆಗೆ ಕೆಲ ದಿನಗಳ ಹಿಂದಷ್ಟೇ ವಿಘ್ನೇಶ್ವರಿ ಹಾಗೂ ಲಕ್ಷ್ಮಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶ್ರೀಲಂಕಾದಿಂದ ವಿಘ್ನೇಶ್ವರಿ ತಿಂಗಳು ಅವಧಿ ಪ್ರವಾಸಿ ವೀಸಾ ಮೇಲೆ ಬಂದಿದ್ದು, ಚಿತ್ತೂರು ಯುವಕನನ್ನು ವಿವಾಹವಾಗಿದ್ದಾಳೆ. ಇದೀಗ ವೀಸಾ ಅವಧಿಯೂ ಮುಗಿಯುತ್ತಿದ್ದು ಆಗಸ್ಟ್ 6ರೊಳಗೆ ದೇಶ ತೊರೆಯುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular