HomeKarnatakaಅಧಿಕಾರಕ್ಕೆ ಬರದ ಕಾರಣ ಕೊಟ್ಟ ಮಾತಿನಂತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡಲಿ: ಕುಮಾರಸ್ವಾಮಿಗೆ ಗುಬ್ಬಿ ಶ್ರೀನಿವಾಸ್...

ಅಧಿಕಾರಕ್ಕೆ ಬರದ ಕಾರಣ ಕೊಟ್ಟ ಮಾತಿನಂತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡಲಿ: ಕುಮಾರಸ್ವಾಮಿಗೆ ಗುಬ್ಬಿ ಶ್ರೀನಿವಾಸ್ ಸವಾಲ್

ತುಮಕೂರು: ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಕೆಟ್ಟದಾಗಿದೆ. ಅಧಿಕಾರಕ್ಕೆ ಬರದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತೇವೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಅವರು ಪಕ್ಷ ವಿಸರ್ಜನೆ ಮಾಡಿ ತೋರಿಸಲಿ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಗುಬ್ಬಿ ಶ್ರೀನಿವಾಸ್ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಕೆಟ್ಟದಾಗಿದೆ. ಅಧಿಕಾರಕ್ಕೆ ಬರದೇ ಇದ್ದರೆ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದು, ಅಂತೆಯೇ ಅವರು ಜೆಡಿಎಸ್ ಪಕ್ಷ ವಿಸರ್ಜನೆ ಮಾಡಿ ತೋರಿಸಲಿ. ಮಂಡ್ಯ ಜನರ ತೀರ್ಮಾನ ನೋಡಿದರೆ ಗೊತ್ತಾಗುತ್ತದೆ. ಬರೀ ಬ್ಲಾಕ್ ಮೇಲ್ ಮಾಡಿ ಈ ಸ್ಥಿತಿಗೆ ಬಂದರು ಎಂದು ಟೀಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಮನಗರದಲ್ಲಿ ನಿಖಿಲ್ ಗೆ ಸೋಲಾಗಿದೆ. ರಾಮನಗರದಲ್ಲಿ ನಿಖಿಲ್ ಉಳ್ಳಿಸಿಕೊಳ್ಳಲು ಆಗಲಿಲ್ಲ. ಕುಮಾರಸ್ವಾಮಿ ನನ್ನನ್ನು ಸೋಲಿಸಲು ಹೊರಟಿದ್ದರು. ರಾಮನಗರದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಕುಟುಂಬ ರಾಜಕಾರಣಕ್ಕೆ ಕಲಿಸಿದ ಪಾಠ ಇದು ಎಂದು ಎಸ್.ಆರ್. ಶ್ರೀನಿವಾಸ್ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular