HomeLatest NewsBIG NEWS: ಸ್ಪೈಸ್ ಜೆಟ್ ವಿಮಾನದಲ್ಲಿಯೂ ತಾಂತ್ರಿಕ ದೋಷ: ತಿರುಪತಿಗೆ ಹೊರಟಿದ್ದ ಫ್ಲೈಟ್ ವಾಪಸ್

BIG NEWS: ಸ್ಪೈಸ್ ಜೆಟ್ ವಿಮಾನದಲ್ಲಿಯೂ ತಾಂತ್ರಿಕ ದೋಷ: ತಿರುಪತಿಗೆ ಹೊರಟಿದ್ದ ಫ್ಲೈಟ್ ವಾಪಸ್

ಹೈದರಾಬಾದ್: ಏರ್ ಇಂಡಿಯಾ ವಿಮಾನದ ಬಳಿಕ ಇದೀಗ ಸ್ಪೀಸ್ ಜೆಟ್ ವಿಮಾನದಲ್ಲಿಯೂ ತಾಂತ್ರಿಕ ದೋಷ ಕಂಡುಬಂದಿದ್ದು, ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಾಪಸ್ ಆದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್ ವಿಮಾನ ನಿಲ್ದಾಣದಿಂದ ತಿರುಪತಿಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಟೇಕ್ ಆಫ್ ಆದ ಕೆಲ ಸಮಯದಲ್ಲೇ ತಾಂತ್ರಿಕ ದೋಷ ಕಂಡುಬಂದಿದ್ದು, ವಿಮಾನವನ್ನು ವಾಪಸ್ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಯಿತು.

ವಿಮಾನ ನಿರ್ವಹಿಸುತ್ತಿದ್ದ Q400 ವಿಮಾನವು ಟೇಕಾಫ್ ಆದ ನಂತರ AFT ಬ್ಯಾಗೇಜ್ ಬಾಗಿಲಿನಿಂದ ಬೆಳಕು ಹೊಮ್ಮಿತು. ಕ್ಯಾಬಿನ್ ಒತ್ತಡವು ಸಾಮಾನ್ಯವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ವಿಮಾನವನ್ನು ಹೈದರಾಬಾದ್ ಗೆ ಹಿಂದಿರುಗಿಸಿದರು. ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ತಪಾಸಣೆ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular