ಪ್ರತಿಯೊಂದು ಮನೆಯಲ್ಲೂ ಮಹಿಳೆಯರು ಎದುರಿಸುವ ದೊಡ್ಡ ಸಮಸ್ಯೆಗಳಲ್ಲಿ ಜಿರಳೆಗಳ ಕಾಟವೂ ಒಂದು. ಇವು ಕೇವಲ ಅಸಹ್ಯವಾಗಿ ಕಾಣಿಸುವುದು ಮಾತ್ರವಲ್ಲದೆ, ಟೈಫಾಯಿಡ್, ಕಾಲರಾ ಮತ್ತು ಅತಿಸಾರದಂತಹ ಅಪಾಯಕಾರಿ ಕಾಯಿಲೆಗಳನ್ನು ಹರಡುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸ್ಪ್ರೇಗಳನ್ನು ಬಳಸಿದಾಗ ಸ್ವಲ್ಪ ಸಮಯ ಪರಿಣಾಮಕಾರಿಯಾಗಿದ್ದರೂ, ಅವುಗಳ ತೀಕ್ಷ್ಣವಾದ ವಾಸನೆಯಿಂದಾಗಿ ಮನೆಯಲ್ಲಿರುವ ಮಕ್ಕಳು ಮತ್ತು ವೃದ್ಧರಿಗೆ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಅದಕ್ಕಾಗಿಯೇ ಯಾವುದೇ ಖರ್ಚಿಲ್ಲದೆ, ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಜಿರಳೆಗಳನ್ನು ಶಾಶ್ವತವಾಗಿ ಹೇಗೆ ಓಡಿಸುವುದು ಎಂದು ಈ ವಿಶೇಷ ಲೇಖನದಲ್ಲಿ ತಿಳಿಯೋಣ.
ಜಿರಳೆಗಳು ಏಕೆ ಬರುತ್ತವೆ ?
ನಿವಾರಣೆಯ ಬಗ್ಗೆ ತಿಳಿಯುವ ಮೊದಲು, ಅವು ಏಕೆ ಬರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅಡುಗೆಮನೆಯ ಸಿಂಕ್ ಕೆಳಗೆ, ಬಾತ್ರೂಮ್ ಪೈಪ್‌ಗಳ ಹತ್ತಿರ ಇರುವ ತೇವಾಂಶವು ಇವುಗಳಿಗೆ ಪ್ರಿಯವಾದ ವಾಸಸ್ಥಾನ. ರಾತ್ರಿ ಹೊತ್ತು ತೊಳೆಯದೆ ಬಿಟ್ಟ ಪಾತ್ರೆಗಳು, ಕೆಳಗೆ ಬಿದ್ದ ಸಕ್ಕರೆ ಅಥವಾ ಅನ್ನದ ಕಣಗಳು ಇವುಗಳನ್ನು ಆಕರ್ಷಿಸುತ್ತವೆ. ಹಳೆಯ ಪತ್ರಿಕೆಗಳು, ರಟ್ಟಿನ ಪೆಟ್ಟಿಗೆಗಳು ಇರುವ ಜಾಗದಲ್ಲಿ ಇವು ಮೊಟ್ಟೆ ಇಟ್ಟು ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತವೆ.
ಅದ್ಭುತವಾದ ಹೋಮ್ ಮೇಡ್ ಸೊಲ್ಯೂಷನ್
- ಬಾಳೆಹಣ್ಣಿನ ಸಿಪ್ಪೆ: ಇದು ಮುಖ್ಯವಾದ ಆಕರ್ಷಕವಾಗಿ ಕೆಲಸ ಮಾಡುತ್ತದೆ. ಇದರ ಸಿಹಿ ವಾಸನೆಯು ಜಿರಳೆಗಳನ್ನು ಕಿಲೋಮೀಟರ್ ದೂರದಿಂದಲೂ ಆಕರ್ಷಿಸುತ್ತದೆ.
- ಸಕ್ಕರೆ: ಇದು ಮಿಶ್ರಣಕ್ಕೆ ಹೆಚ್ಚಿನ ರುಚಿಯನ್ನು ನೀಡಿ, ಜಿರಳೆಗಳು ಆ ಮಿಶ್ರಣವನ್ನು ತಿನ್ನುವಂತೆ ಮಾಡುತ್ತದೆ.
- ಡಿಟರ್ಜೆಂಟ್ ಅಥವಾ ಲಿಕ್ವಿಡ್ ಸೋಪ್: ಇದು ಜಿರಳೆಗಳ ಉಸಿರಾಟದ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
ಸ್ಟೆಪ್–ಬೈ–ಸ್ಟೆಪ್ ಪ್ರಕ್ರಿಯೆ
- ಮೊದಲಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಕತ್ತರಿಸಿದ ನಂತರ ಅವುಗಳನ್ನು ಸ್ವಲ್ಪ ನುಜ್ಜುಗುಜ್ಜು ಮಾಡಿದರೆ ವಾಸನೆ ಮತ್ತಷ್ಟು ಬಲವಾಗಿ ಬರುತ್ತದೆ.
- ಒಂದು ಸಣ್ಣ ಪ್ಲಾಸ್ಟಿಕ್ ಬಟ್ಟಲು ಅಥವಾ ಹಳೆಯ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಸಕ್ಕರೆ ಮತ್ತು ಡಿಟರ್ಜೆಂಟ್ ಹಾಕಿ.
- ಅದಕ್ಕೆ ನೀರು ಹಾಕಿ, ಸಕ್ಕರೆ ಸಂಪೂರ್ಣವಾಗಿ ಕರಗುವಂತೆ ಚೆನ್ನಾಗಿ ಕಲಕಿ.
- ಕೊನೆಯದಾಗಿ ಸಿದ್ಧಪಡಿಸಿದ ಬಾಳೆಹಣ್ಣಿನ ಚೂರುಗಳನ್ನು ಆ ನೀರಿನಲ್ಲಿ ಹಾಕಿ. ಈ ಮಿಶ್ರಣವು ತೀರಾ ಗಟ್ಟಿಯಾಗಿರಬಾರದು, ಜಿರಳೆಗಳು ಅದರಲ್ಲಿ ಮುಳುಗುವಂತೆ ದ್ರವ ರೂಪದಲ್ಲಿರಲಿ.
ಬಳಸುವ ವಿಧಾನ
ಈ ಬಟ್ಟಲನ್ನು ಮನೆಯ ಮೂಲೆಗಳಲ್ಲಿ ಇರಿಸುವಾಗ ಕೆಲವು ಜಾಗರೂಕತೆಗಳನ್ನು ಪಾಲಿಸಬೇಕು. ರಾತ್ರಿ ಹೊತ್ತು ಸಿಂಕ್ ಕೆಳಗಿನ ಭಾಗವು ಕತ್ತಲಾಗಿರುವುದರಿಂದ ಅಲ್ಲಿ ಒಂದು ಬಟ್ಟಲನ್ನು ಇಡಿ. ಆಹಾರದ ತ್ಯಾಜ್ಯವಿರುವ ಕಡೆ ಜಿರಳೆಗಳ ಸಂಚಾರ ಹೆಚ್ಚು ಇರುವುದರಿಂದ ಅಲ್ಲಿಯೂ ತಪ್ಪದೇ ಇಡಿ. ಜಿರಳೆಗಳು ಬಾಳೆಹಣ್ಣು ಮತ್ತು ಸಕ್ಕರೆಯ ವಾಸನೆಗೆ ಆಕರ್ಷಿತವಾಗಿ ಬಟ್ಟಲಿನ ಹತ್ತಿರ ಬಂದು ಆ ನೀರನ್ನು ಕುಡಿಯುತ್ತವೆ. ಡಿಟರ್ಜೆಂಟ್ ನೀರು ಅವುಗಳ ದೇಹಕ್ಕೆ ತಗುಲಿದ ತಕ್ಷಣ, ಅವುಗಳ ಚರ್ಮದ ಮೇಲಿರುವ ರಂಧ್ರಗಳು ಮುಚ್ಚಿಹೋಗುತ್ತವೆ. ಇದರಿಂದ ಅವು ಉಸಿರಾಡಲು ಸಾಧ್ಯವಾಗದೆ ಕೆಲವೇ ನಿಮಿಷಗಳಲ್ಲಿ ಸತ್ತೋಗುತ್ತವೆ.
ಗಮನಿಸಬೇಕಾದ ಅಂಶಗಳು
ಈ ಮಿಶ್ರಣದಲ್ಲಿ ಡಿಟರ್ಜೆಂಟ್ ಇರುವುದರಿಂದ ಸಣ್ಣ ಮಕ್ಕಳು ಅಥವಾ ಸಾಕುಪ್ರಾಣಿಗಳು ಇದನ್ನು ಮುಟ್ಟದಂತೆ ಎತ್ತರದ ಪ್ರದೇಶಗಳಲ್ಲಿ ಅಥವಾ ಅವರಿಗೆ ಸಿಗದಂತೆ ಇಡಬೇಕು. ಬಾಳೆಹಣ್ಣಿನ ಚೂರುಗಳು ಕೊಳೆತರೆ ವಾಸನೆ ಬದಲಾಗುತ್ತದೆ. ಆದ್ದರಿಂದ ಪ್ರತಿ 2 ದಿನಕ್ಕೊಮ್ಮೆ ಹಳೆಯ ಮಿಶ್ರಣವನ್ನು ಚೆಲ್ಲಾಡಿ ಹೊಸದನ್ನು ತಯಾರಿಸಬೇಕು. ಈ ಉಪಾಯದ ಜೊತೆಗೆ ರಾತ್ರಿ ವೇಳೆ ಅಡುಗೆಮನೆಯನ್ನು ಸ್ವಚ್ಛವಾಗಿಡುವುದು ಮತ್ತು ನೀರು ನಿಲ್ಲದಂತೆ ನೋಡಿಕೊಂಡರೆ ಜಿರಳೆಗಳು ಮತ್ತೆಂದೂ ನಿಮ್ಮ ಮನೆಯತ್ತ ಸುಳಿಯುವುದಿಲ್ಲ.

