ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ ಪಾಲಿಯಾ ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರೊಂದು ಬೈಸಿಕಲ್‌ನಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ವೃದ್ಧ ಸಾವನ್ನಪ್ಪಿದ್ದಾರೆ. ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ರಸ್ತೆಯ ಎಡಭಾಗದಲ್ಲಿ ವಯಸ್ಸಾದ ವ್ಯಕ್ತಿ ತನ್ನ ಸೈಕಲ್‌ನಲ್ಲಿ ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಹಠಾತ್ತನೆ ಅವರು ಬಲಕ್ಕೆ ತಿರುಗಲು ಪ್ರಯತ್ನಿಸುತ್ತಾರೆ. ಈ ವೇಳೆ ವೇಗವಾಗಿ ಬರುತ್ತಿರುವ ಕಾರಿನ ಬಗ್ಗೆ ತಿಳಿಯುವುದಿಲ್ಲ. ದುರಂತವೆಂದರೆ ಕಾರು ಸೈಕಲ್ ಗೆ ಡಿಕ್ಕಿಯಾಗುತ್ತಿದ್ದಂತೆ ವೃದ್ಧ ಕೆಳಗೆ ಬೀಳುತ್ತಾರೆ.
ತಕ್ಷಣ ಕಾರ್ ನಿಲ್ಲಿಸಿದರೂ ಜನ ಸೇರುತ್ತಿದ್ದಂತೆ ಕಾರ್ ಚಾಲಕ ವಾಹನ ಸಮೇತ ಪರಾರಿಯಾಗುತ್ತಾನೆ. ವೃದ್ಧರು ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಈ ದುರಂತ ಅಪಘಾತ ಸಂಭವಿಸಿದಾಗ ವೃದ್ಧರುಸ್ಥಳೀಯ ಮಾರುಕಟ್ಟೆಗೆ ಮನೆಯಿಂದ ಹೊರಟಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಚಾಲಕನನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
https://twitter.com/BnBagul/status/1670808795642048513?ref_src=twsrc%5Etfw%7Ctwcamp%5Etweetembed%7Ctwterm%5E1670808795642048513%7Ctwgr%5Ea9acb28412e72d9ed5c0b3935a8d243334728532%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-speeding-car-runs-over-elderly-cyclist-on-palia-state-highway-in-lakhimpur-cctv-footage-surfaces