HomeLatest Newsರಾಯಚೂರು 'ಶ್ರೀಶೈಲಂ ಜಾತ್ರೆ' ಪ್ರಯುಕ್ತ ವಿಶೇಷ ಬಸ್ಸುಗಳ ಸಂಚಾರ, ಇಲ್ಲಿದೆ ಮಾಹಿತಿ

ರಾಯಚೂರು ‘ಶ್ರೀಶೈಲಂ ಜಾತ್ರೆ’ ಪ್ರಯುಕ್ತ ವಿಶೇಷ ಬಸ್ಸುಗಳ ಸಂಚಾರ, ಇಲ್ಲಿದೆ ಮಾಹಿತಿ

ರಾಯಚೂರು  :   ಫೆ.10 ರಿಂದ ಫೆ.18ರವರೆಗೆ ಶ್ರೀಶೈಲಂ ಜಾತ್ರೆಯು ನಡೆಯುತ್ತಿದೆ. ಫೆ.15ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಜರುಗಲಿರುವ ಪ್ರಯುಕ್ತ ಶ್ರೀಶೈಲಂ ಶ್ರೀಮಲ್ಲಿಕಾರ್ಜುನ ಜಾತ್ರಗೆ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಲಿಂಗಸೂಗುರು, ಸಿಂಧನೂರು, ಮಾನವಿ, ದೇವದುರ್ಗ, ಮಸ್ಕಿ ಘಟಕಗಳಿಂದ ವಿಶೇಷ ಬಸ್ಸುಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಈ ಜಾತ್ರೆಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು-ಕರ್ನೂಲ್- ಶ್ರೀಶೈಲಂ, ಸಿಂಧನೂರು- ಆದೋನಿ- ಶ್ರೀಶೈಲಂ, ಸಿಂಧನೂರು- ರಾಯಚೂರು- ಕರ್ನೂಲ್- ಶ್ರೀಶೈಲಂ, ಲಿಂಗಸೂಗುರು- ರಾಯಚೂರು- ಕರ್ನೂಲ್- ಶ್ರೀಶೈಲಂ, ಲಿಂಗಸೂಗುರು- ಮಸ್ಕಿ- ಸಿಂಧನೂರು- ಆದೋನಿ- ಶ್ರೀಶೈಲಂ, ಮಾನವಿ- ರಾಯಚೂರು- ಕರ್ನೂಲ್- ಶ್ರೀಶೈಲಂ, ದೇವದುರ್ಗ- ರಾಯಚೂರು- ಕರ್ನೂಲ್- ಶ್ರೀಶೈಲಂ, ಮಸ್ಕಿ- ರಾಯಚೂರು- ಕರ್ನೂಲ್- ಶ್ರೀಶೈಲಂ, ಮಸ್ಕಿ- ಸಿಂಧನೂರು- ಆದೋನಿ- ಶ್ರೀಶೈಲಂ ಮಾರ್ಗದಲ್ಲಿ ಕಾರ್ಯಾಚರಣೆಗೆ ತರಲಾಗುತ್ತಿದೆ.

50 ಪ್ರಯಾಣಿಕರು ಲಭ್ಯ ಇದ್ದಲ್ಲಿ ಅವರ ಸ್ವ-ಸ್ಥಳದಿಂದ ನೇರವಾಗಿ ಶ್ರೀಶೈಲಂಗೆ ಬಸ್ಸು ವ್ಯವಸ್ಥೆಯನ್ನು ಒದಗಿಸುವದಕ್ಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹಾಗೂ ಪ್ರಯಾಣಿಕರು ಮಹಾನಂದಿಗೆ ಹೋಗುವದಕ್ಕೆ ಇಷ್ಟ ಪಟ್ಟಲ್ಲಿ, ಅಲ್ಲಿಗೆ ಕರೆದುಕೊಂಡು ಹೋಗಿ ಬರಲಾಗುತ್ತಿದ್ದು, ಶ್ರೀಶೈಲಂಗೆ ಹೋಗಿ ಬರುವ ಪ್ರಯಾಣಿಕರು ಈ ವಿಶೇಷ ಬಸ್ಸುಗಳ ಸೌರ್ಕಯವನ್ನು ಪಡೆದುಕೊಳ್ಳಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ 1ನೇ ಘಟಕ ರಾಯಚೂರು: 7760992363, 2ನೇ ಘಟಕ ರಾಯಚೂರು: 7760992364, 3ನೇ ಘಟಕ ರಾಯಚೂರು: 7619351087, ಲಿಂಗಸೂಗುರು: 7760992365, ಸಿಂಧನೂರು: 7760992366, ಮಾನವಿ: 7760992367, ದೇವದುರ್ಗ: 7760992368, ಮಸ್ಕಿ: 7760992361 ಅಥವಾ ವಿಭಾಗೀಯ ಸಂಚಾರ ಅಧಿಕಾರಿ: 7760992352ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ ಎಂ.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular