HomeKarnatakaBIG NEWS: ಮಗನ ಅನಾರೋಗ್ಯದಿಂದ ನೊಂದ ತಾಯಿ; ಜಲಾಶಯಕ್ಕೆ ಹಾರಿ ಆತ್ಮಹತ್ಯೆ

BIG NEWS: ಮಗನ ಅನಾರೋಗ್ಯದಿಂದ ನೊಂದ ತಾಯಿ; ಜಲಾಶಯಕ್ಕೆ ಹಾರಿ ಆತ್ಮಹತ್ಯೆ

ಧಾರವಾಡ: ಆರೋಗ್ಯ ಸಮಸ್ಯೆ ಎಂಬುದು ಯಾವುದೇ ಕ್ಷಣದಲ್ಲಿ ಎಂತವರನ್ನೂ ಕಾಡುತ್ತದೆ. ಶ್ರೀಮಂತರು, ಬಡವರು, ಮಕ್ಕಳು, ದೊಡ್ಡವರೆಂಬ ವ್ಯತ್ಯಾಸವಿಲ್ಲ… ಮಗ ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂದು ಕನಸು ಕಂಡಿದ್ದ ತಾಯಿಯೊಬ್ಬರು ಮಗ ಅನಾರೋಗ್ಯದಿಂದಾಗಿ ಬಳಲುತ್ತಿರುವುದು ಕಂಡು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಮಗನ ಆರೋಗ್ಯ ಸಮಸ್ಯೆಗೆ ತೀವ್ರವಾಗಿ ನೊಂದಿದ್ದ ತಾಯಿ ನವಿಲುತೀರ್ಥ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪ್ರಿಯದರ್ಶಿನಿ ಲಿಂಗರಾಜ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮಗನ ಅನಾರೋಗ್ಯದಿಂದ ಆಘಾತಕ್ಕೊಳಗಾಗಿ ನೊಂದಿದ್ದ ಪ್ರಿಯದರ್ಶಿನಿ, ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಿಯದರ್ಶಿನಿ ಪತಿ ಲಿಂಗರಾಜ್ ಪಾಟೀಲ್ ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿದ್ದು, ಪುತ್ರನ ಅನಾರೋಗ್ಯ ಹಿನ್ನೆಲೆಯಲ್ಲಿ ಪ್ರಿಯದರ್ಶಿನಿ ಆಗಸ್ಟ್ 18ರಂದು ಮಗನನ್ನು ಆರೈಕೆ ಮಾಡಲು ಬಂದಿದ್ದರು ಎನ್ನಲಾಗಿದೆ. ಆದರೆ ಮಗ ಸ್ಥಿತಿಯಿಂದ ಕಂಗೆಟ್ಟ ತಾಯಿ ತೀವ್ರ ಚಿಂತೆಗೀಡಾಗಿದ್ದು, ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular