HomeKarnatakaBREAKING : ತುಮಕೂರಿನಲ್ಲಿ ಘೋರ ಘಟನೆ ; ಆಸ್ತಿಗಾಗಿ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ.!

BREAKING : ತುಮಕೂರಿನಲ್ಲಿ ಘೋರ ಘಟನೆ ; ಆಸ್ತಿಗಾಗಿ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ.!

ತುಮಕೂರು: ತಂದೆ-ತಾಯಿಗಳು ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಾರೆ. ಕುಟುಂಬಕ್ಕೆ, ಸಮಾಜಕ್ಕೆ ಬೆಳಕಾಗಲಿ ಎಂದು ಆಶಿಸುತ್ತಾರೆ. ಆದರೆ ಇಲ್ಲೋರ್ವ ಮಗ, ವೃದ್ಧ ತಂದೆಯನ್ನೇ ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ.

ಆಸ್ತಿ ಆಸೆಗಾಗಿ ಮಗನೇ ತನ್ನ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಲವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆಸ್ತಿಗಾಗಿ 75 ವರ್ಷದ ತಂದೆ ವೆಂಕಟಪ್ಪನನ್ನು ಪುತ್ರ ಸಿದ್ದಪ್ಪ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇತ್ತೀಚೆಗೆ ವೆಂಕಟಪ್ಪ ಜಮೀನು ಮಾರಿ 25 ಲಕ್ಷ ಹಣವನ್ನು ಪುತ್ರಿಗೆ ಕೊಟ್ಟಿದ್ದ. ಹಣವನ್ನು ಪುತ್ರಿಗೆ ಕೊಟ್ಟಿದ್ದಕ್ಕೆ ಕೋಪಗೊಂಡಿದ್ದ ಮಗ ಸಿದ್ದಪ್ಪ ತಂದೆಯೊಂದಿಗೆ ಜಗಳವಾಡಿದ್ದ. ತಂದೆ ಹಾಗೂ ಮಗನ ನಡುವಿನ ಗಲಾಟೆ ತಾರಕಕ್ಕೇರಿತ್ತು. ಅದೇ ಕೋಪದಲ್ಲಿ ಸಿದ್ದಪ್ಪ, ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಎಸ್ಕೇಪ್ ಆಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular