HomeKarnatakaBIG NEWS: ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ಕೇಳಿದ್ದಕ್ಕೆ ಮಗನನ್ನೇ ಹತ್ಯೆಗೈದ ತಂದೆ

BIG NEWS: ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ಕೇಳಿದ್ದಕ್ಕೆ ಮಗನನ್ನೇ ಹತ್ಯೆಗೈದ ತಂದೆ

ಬೆಂಗಳೂರು: ತಂದೆಯೊಬ್ಬ 14 ವರ್ಷದ ಮಗನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.

ತೇಜಸ್ (14) ತಂದೆಯಿಂದಲೇ ಕೊಲೆಯಾದ ಮಗ. ರವಿಕುಮಾರ್ ಮಗನನ್ನೇ ಕೊಂದ ತಂದೆ. ತೇಜಸ್ ತನ್ನ ತಂದೆಯ ಬಳಿ ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ಕೇಳಿದ್ದ.  ತಂದೆ, ಮಗನ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಮನಸೋಇಚ್ಛೆ ಹೊಡೆದಿದ್ದಾನೆ.

ಕಳೆದ 20 ದಿನಗಳಿಂದ ಮಗ ಶಾಲೆಗೆ ಹೋಗದೆ ಪುಂಡರ ಜೊತೆ ಅಲೆದಡುತ್ತಿದ್ದಂನಂತೆ ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ತಂದೆ ಬಳಿ ಕೇಳಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ತಂದೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆ ಜೋರಾಗಿದ್ದು, ಕೋಪದಬರದಲ್ಲಿ ರವಿಕುಮಾರ್ ಮಗನನ್ನೇ ಕೊಲೆಗೈದಿದ್ದಾನೆ. ಕುಮರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular