HomeKarnatakaSHOCKING NEWS: ತಂದೆಯನ್ನೇ ಚಾಕುವಿನಿಂದ ಇರಿದು ಕೊಂದ ಮಗ

SHOCKING NEWS: ತಂದೆಯನ್ನೇ ಚಾಕುವಿನಿಂದ ಇರಿದು ಕೊಂದ ಮಗ

ಬೆಂಗಳೂರು: ಮಗನೊಬ್ಬ ಹೆತ್ತ ತಂದೆಯನ್ನೇ ಚಾಕುವಿನಿಂದ ಇರುದು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ನಡೆದಿದೆ.

76 ವರ್ಷದ ವೇಲಾಯುದನ್ ಕೊಲೆಯಾಗಿರುವ ತಂದೆ. ವಿನೋದ್ ಕುಮಾರ್ ತಂದೆಯನ್ನೇ ಕೊಲೆಗೈದ ಮಗ. ವೇಲಾಯುದನ್ ಹಾಗೂ ವಿನೋದ್ ಕುಮಾರ್ ಇಬ್ಬರೂ ಮೂಲತಃ ಕೇರಳದ ಏರಿಮಲೆಯವರು. ತಂದೆ ಮಗನ ನಡುವೆ ಗಲಾಟೆಯಾಗಿತ್ತು. ಮನೆಯಲ್ಲಿದ್ದ ಚಾಕು ತೆಗೆದುಕೊಂಡು ವಿನೋದ್ ಕುಮಾರ್ ತಂದೆಗೆ ಇರಿದು ಕೊಂದಿದ್ದಾನೆ.

ಸ್ಥಳದಲ್ಲೇ ವೇಲಾಯುದನ್ ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ಪೊಲೀಸರು ಆರೋಪಿ ವಿನೋದ್ ಕುಮಾರ್ ನನ್ನು ವಶಕ್ಕೆ ಪಡೆದುಇ ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular