HomeKarnatakaಕುಡಿತದ ಚಟಕ್ಕೆ ಹಣ ಕೊಟ್ಟಿಲ್ಲ ಎಂದು ತಂದೆಯನ್ನೇ ಕೊಲೆಗೈದ ಮಗ

ಕುಡಿತದ ಚಟಕ್ಕೆ ಹಣ ಕೊಟ್ಟಿಲ್ಲ ಎಂದು ತಂದೆಯನ್ನೇ ಕೊಲೆಗೈದ ಮಗ

ಬೆಳಗಾವಿ: ಕುಡಿತದ ದಾಸನಾಗಿದ್ದ ಮಗ ತನ್ನ ತಂದೆಯನ್ನೇ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದಲ್ಲಿ ನಡೆದಿದೆ.

ಮದ್ಯ ಸೇವನೆಗೆ ಹಣ ಕೊಟ್ಟಿಲ್ಲ ಎಂದು ಕೋಪಗೊಂಡ ಮಗ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ತುಕಾರಾಂ ವನಖಂಡೆ (89) ಮೃತ ದುರ್ದೈವಿ. ಬಾಳಾಸಾಬ ಮಲ್ಲು (49) ತಂದೆಯನ್ನೇ ಕೊಲೆಗೈದ ಮಗ. ವೃದ್ಧ ತಂದೆಯನ್ನು ನೋಡಿಕೊಳ್ಳಬೇಕಿದ್ದ ಮಗ ಕುಡಿತದ ಚಟಕ್ಕೆ ಬಿದ್ದು, ವ್ಯಸನಕ್ಕಾಗಿ ತಂದೆಯ ಬಳಿಯೇ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ತಂದೆ ಹಣ ಕೊಡಲು ಒಪ್ಪದಿದ್ದಾಗ ಮಾರಣಾಂತಿಕವಾಗಿ ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ತಂದೆ ತುಕಾರಾಂ ಅವರನ್ನು ಮಹಾರಾಷ್ಟ್ರದ ಮೀರಜ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಗ ಬಾಳಾಸಾಬ ಮಲ್ಲುನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular