HomeKarnatakaBIG NEWS: ಅಳಿಯನಿಂದಲೇ ಮಗನ ಕೊಲೆ; ಆತ್ಮಹತ್ಯೆಗೆ ಶರಣಾದ ತಾಯಿ

BIG NEWS: ಅಳಿಯನಿಂದಲೇ ಮಗನ ಕೊಲೆ; ಆತ್ಮಹತ್ಯೆಗೆ ಶರಣಾದ ತಾಯಿ

ಮೈಸೂರು: ಅಳಿಯನಿಂದಲೇ ಮಗನ ಕೊಲೆ ವಿಚಾರ ತಿಳಿದು ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕೂರ್ಗಳ್ಳಿಯಲ್ಲಿ ನಡೆದಿದೆ.

ಭಾಗ್ಯಮ್ಮ (46) ಆತ್ಮಹತ್ಯೆಗೆ ಶರಣಾದವರು. ಮನೆಯಲ್ಲಿಯೇ ನೇಣುಬಿಗಿದುಕೊಂಡು ಭಾಗ್ಯಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಗ್ಯಮ್ಮ ಪುತ್ರ ಅಭಿಷೇಕ್ ಅಳಿಯ ರವಿಚಂದ್ರನ್ ನಿಂದಲೇ ಕೊಲೆಯಾಗಿದ್ದ.

ಮಗಳನ್ನು ರವಿಚಂದ್ರನ್ ಎಂಬಾತನಿಗೆ ಕೊಟ್ಟು ಭಾಗ್ಯಮ್ಮ ಮದುವೆ ಮಾಡಿದ್ದರು. ಆದರೆ ವರದಕ್ಷಿಣೆಗಾಗಿ ರವಿಚಂದ್ರನ್ ಪತ್ನಿಗೆ ಪೀಡಿಸುತ್ತಿದ್ದ. ಜೂನ್ 9ರಂದು ಪತ್ನಿಯ ಮೇಲೆ ರವಿಚಂದ್ರನ್ ಹಲ್ಲೆ ನಡೆಸಿದ್ದ. ಪತಿ-ಪತ್ನಿ ನಡುವೆ ಜಗಳವಾಗಿತ್ತು. ಈ ವೇಳೆ ಅಭಿಷೇಕ್ ಜಗಳ ಬಿಡಿಸಲು ಹೋಗಿದ್ದ. ಇದೇ ವೇಳೆ ರವಿಚಂದ್ರನ್, ಭಾವ ಅಭಿಷೇಕ್ ಗೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೈದಿದ್ದ. ಮೈಸೂರಿನ ಕುವೆಂಪುನಗರದಲ್ಲಿ ಈ ಕೊಲೆ ನಡೆದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಗನ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಭಾಗ್ಯಮ್ಮ, ನೋವಿನಿಂದ ಹೊರಬರಲಾಗದೇ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular