HomeKarnatakaBIG NEWS: ಸೋಮಣ್ಣಗೂ ಒಳ್ಳೆ ಕಾಲ ಬಂದೇ ಬರುತ್ತೆ ಎಂದ ಎನ್. ರವಿಕುಮಾರ್

BIG NEWS: ಸೋಮಣ್ಣಗೂ ಒಳ್ಳೆ ಕಾಲ ಬಂದೇ ಬರುತ್ತೆ ಎಂದ ಎನ್. ರವಿಕುಮಾರ್

ಬೆಂಗಳೂರು: ಬಿಜೆಪಿಗೆ ಬಂದು ಸೋತೆ ಎಂದು ಬೇಸರ ವ್ಯಕ್ತಪಡಿಸಿರುವ ಮಾಜಿ ಸಚಿವ ವಿ.ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಎನ್.ರವಿಕುಮಾರ್, ಬಿಜೆಪಿಗೆ ಬಂದು ಸೋತೆ ಎಂಬುದು ಅವರ ವೈಯಕ್ತಿಕ ಹೇಳಿಕೆ. ಆದರೆ ಪ್ರತಿಯೊಬ್ಬರಿಗೂ ಸೋಲು-ಗೆಲುವು ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.

ವಾಜಪೇಯಿ, ಇಂದಿರಾಗಾಂಧಿ, ಯಡಿಯೂರಪ್ಪನವರೂ ಕೂಡ ಸೋತಿದ್ದರು. ಪ್ರತಿಯೊಬ್ಬರಿಗೂ ಒಮ್ಮೆ ಸೋಲಾಗುತ್ತದೆ, ಮತ್ತೊಮ್ಮೆ ಗುಲುವಾಗುತ್ತದೆ. ಬಿಜೆಪಿಗೆ ಬಂದಿದ್ದರಿಂದ ಸೋತೆ ಅಂತ ಸೋಮಣ್ಣ ಹೇಳಿರುವುದು ಅವರ ವೈಯಕ್ತಿಕ. ಅವರು ಪ್ರಮುಖರ ಜೊತೆ ಕುಳಿತು ಚರ್ಚಿಸಲಿ. ಸೋಮಣ್ಣ ಸೋತಿರುವ ಬೇಸರದಲ್ಲಿ ಹೇಳಿರಬಹುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಮಣ್ಣ ಅವರಿಗೂ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಎನ್.ರವಿಕುಮಾರ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular