HomeLatest Newsಸೋಷಿಯಲ್ ಮೀಡಿಯಾ ಹುಚ್ಚಿಗೆ ಮಗುವಿನ ಪ್ರಾಣವೇ ಪಣ: ಕೊರಳಿಗೆ ಹಗ್ಗ ಸಿಲುಕಿ ಒದ್ದಾಡುತ್ತಿದ್ದರೂ ಕ್ಯಾಮೆರಾ ಹಿಡಿದು...

ಸೋಷಿಯಲ್ ಮೀಡಿಯಾ ಹುಚ್ಚಿಗೆ ಮಗುವಿನ ಪ್ರಾಣವೇ ಪಣ: ಕೊರಳಿಗೆ ಹಗ್ಗ ಸಿಲುಕಿ ಒದ್ದಾಡುತ್ತಿದ್ದರೂ ಕ್ಯಾಮೆರಾ ಹಿಡಿದು ನಿಂತ ತಾಯಿಯ ಕ್ರೂರ ಕೃತ್ಯ ವೈರಲ್ WATCH VIDEO

ಬೆಂಗಳೂರು: ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಬೇಕು, ಸೆಲೆಬ್ರಿಟಿ ಆಗಬೇಕು ಎನ್ನುವ ಹುಚ್ಚು ಜನರ ತಲೆಗೆ ಎಷ್ಟು ಕಟುವಾಗಿ ಏರಿದೆ ಎಂದರೆ, ಅದಕ್ಕಾಗಿ ಅವರು ತಮ್ಮ ಹಾಗೂ ತಮ್ಮ ಹೆತ್ತ ಮಕ್ಕಳ ಪ್ರಾಣವನ್ನೂ ಪಣಕ್ಕಿಡಲು ಹಿಂಜರಿಯುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿದ್ದರೂ, ಇದೀಗ ವೈರಲ್ ಆಗಿರುವ ಈ ಕ್ರೂರ ತಾಯಿಯ ಅಮಾನವೀಯ ಕೃತ್ಯ ನೋಡಿ ಇಡೀ ಇಂಟರ್ನೆಟ್ ಜಗತ್ತೇ ಬೆಚ್ಚಿಬಿದ್ದಿದೆ.

ಆಡುತ್ತಾ ಆಡುತ್ತಾ ಮಗುವಿನ ಕೊರಳಿಗೆ ಹಗ್ಗ ಸಿಲುಕಿಕೊಂಡು, ಉಸಿರುಗಟ್ಟಿ ಮಗು ಪ್ರಾಣಭಯದಿಂದ ಅಮ್ಮಾ ಕಾಪಾಡು ಎಂದು ರೋದಿಸುತ್ತಿದ್ದರೂ, ಆ ಮಹಿಳೆ ಮಾತ್ರ ಮಗುವನ್ನು ರಕ್ಷಿಸುವುದನ್ನು ಬಿಟ್ಟು ಮೊಬೈಲ್‌ನಲ್ಲಿ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾಳೆ

ಅಮ್ಮಾ.. ಅಮ್ಮಾ ಎಂದು ಕಿರುಚಿದರೂ ಕರಗದ ಹೆತ್ತ ಕರುಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರುಳು ಹಿಂಡುವ ಈ ಘಟನೆಗೆ ಸಂಬಂಧಿಸಿದ ವೈರಲ್ ವಿಡಿಯೋವನ್ನು ರೋಹಿತ್ ಸಿಂಗ್ ಎಂಬುವವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ವಿಡಿಯೋದಲ್ಲಿ ಕಾಣಿಸುವಂತೆ, ಬಾಲಕನು ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಹಗ್ಗವನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. ಆ ಬಳಿಕ ಉಸಿರಾಡಲು ಕಷ್ಟಪಟ್ಟು ಒದ್ದಾಡುತ್ತಾ, ಪ್ರಾಣಭಯದಿಂದ “ಅಮ್ಮಾ ಅಮ್ಮಾ..” ಎಂದು ಕಿರುಚಿದ್ದಾನೆ. ಆದರೆ ಹೆತ್ತ ಕರುಳಿನ ಮಮತೆಯನ್ನೇ ಮರೆತ ಆ ತಾಯಿ, ಮಗುವಿನ ಕುತ್ತಿಗೆಯಿಂದ ಹಗ್ಗ ಬಿಡಿಸುವ ಬದಲು ಕ್ಯಾಮೆರಾ ಹಿಡಿದು ವಿಡಿಯೋ ರೆಕಾರ್ಡ್ ಮಾಡಲು ಆದ್ಯತೆ ನೀಡಿದ್ದಾಳೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಮಗುವಿನ ಜೀವಕ್ಕೆ ಕುತ್ತು ಬರುತ್ತಿತ್ತು ಎಂಬುದು ವಿಡಿಯೋ ನೋಡಿದರೆ ಸ್ಪಷ್ಟವಾಗಿ ತಿಳಿಯುತ್ತದೆ.

ವಿಡಿಯೋ ಹಂಚಿಕೊಂಡಿರುವ ರೋಹಿತ್ ಸಿಂಗ್ ಅವರು “ಮಗುವಿನ ಕುತ್ತಿಗೆಗೆ ಹಗ್ಗ ಸಿಲುಕಿಕೊಂಡಿದೆ, ಅಮ್ಮ ಕಾಪಾಡು ಎಂದು ಮಗು ಕಿರುಚಾಡುತ್ತಿದೆ. ಇಂತಹ ನಿರ್ಲಕ್ಷ್ಯದಿಂದ ಪ್ರಾಣವೇ ಹೋಗಬಹುದು. ಆದರೆ ಆ ತಾಯಿ ಮಾತ್ರ ವಿಡಿಯೋ ಮಾಡುವುದರಲ್ಲೇ ಮಗ್ನಳಾಗಿದ್ದಾಳೆ. ಸೋಶಿಯಲ್ ಮೀಡಿಯಾ ಎಂಬುದು ಈಗ ಹಳ್ಳಿಗಳಿಗೂ ಕ್ಯಾನ್ಸರ್ ರೋಗದಂತೆ ಹರಡುತ್ತಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರ ಆಗ್ರಹ:

ಈ ಘೋರ ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ, ಮೇ 15, 2026 ರಂದು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಈಗಾಗಲೇ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ಹೆತ್ತ ತಾಯಿಯೇ ಆಗಿ ಇವಳು ಮಗುವಿಗೆ ಶತ್ರುವಿನಂತೆ ವರ್ತಿಸಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ.ಮತ್ತೊಬ್ಬರು, ರೀಲ್ಸ್ ಹುಚ್ಚು ಈ ರಾಕ್ಷಸಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈಕೆಯನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular