HomeLatest Newsಗಗನಕ್ಕೇರಿದ ತೆಂಗಿನಕಾಯಿ ದರ: ಗ್ರಾಹಕರು ಕಂಗಾಲು

ಗಗನಕ್ಕೇರಿದ ತೆಂಗಿನಕಾಯಿ ದರ: ಗ್ರಾಹಕರು ಕಂಗಾಲು

ಅಕ್ಕಿ, ಬೇಳೆ ಕಾಳು, ಹಣ್ಣು, ತರಕಾರಿ, ಖಾದ್ಯ ತೈಲ, ಇಂಧನ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ತೆಂಗಿನಕಾಯಿ ದರ ಕೂಡ ಏರಿಕೆಯಾಗಿದೆ,

ಮಾರುಕಟ್ಟೆಯಲ್ಲಿ ಕೆಜಿ ತೆಂಗಿನ ಕಾಯಿ ದರ 75ರಿಂದ 86 ರೂಪಾಯಿಗೆ ಏರಿಕೆಯಾಗಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ತೆಂಗಿನಕಾಯಿ ದರ ಏರುಗತಿಯಲ್ಲೇ ಇದೆ. 2022- 23ರ ವೇಳೆಗೆ ಮಾರುಕಟ್ಟೆಯಲ್ಲಿ ಕೆಜಿ ತೆಂಗಿನ ಕಾಯಿಗೆ 18 ರಿಂದ 20 ರೂಪಾಯಿ ದರವಿತ್ತು. 2024ರಲ್ಲಿ 30 ರಿಂದ 35 ರೂ. 2025ರ ಆರಂಭದಲ್ಲಿ 60 ರಿಂದ 65 ಏರಿಕೆಯಾಗಿತ್ತು. ಇದೀಗ 75 ರೂ.ವರೆಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಕೆಲವೆಡೆ ತೆಂಗಿನಕಾಯಿ ದರ 40 ರೂ., 50 ರೂ., 60 ರೂ.ಇದ್ದು, ಮತ್ತೆ ಕೆಲವೆಡೆ 80 ರೂ.ವರೆಗೂ ಮಾರಾಟವಾಗುತ್ತಿದೆ. ತೆಂಗಿನಎಣ್ಣೆ ದರ ಕೂಡ ಏರಿಕೆಯಾಗಿದೆ. ತೆಂಗಿನ ಎಣ್ಣೆ ದರ ಲೀಟರ್ ಗೆ 340 ರಿಂದ 360 ರೂ.ಗೆ ಏರಿಕೆಯಾಗಿದ್ದು, ಅಡುಗೆಗೆ ತೆಂಗಿನ ಎಣ್ಣೆ ಬಳಸುವವರಿಗೆ ಬಿಸಿ ತಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ತೆಂಗಿನ ಇಳುವರಿ ಕುಸಿತವಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತೆಂಗಿನಕಾಯಿ ಬರುತ್ತಿದೆ. ಇನ್ನು ಎಳನೀರಿಗೆ ಭಾರೀ ಬೇಡಿಕೆ, ಹೆಚ್ಚಿನ ಬೆಲೆ ಇರುವುದರಿಂದ ಬಹುತೇಕ ಬೆಳೆಗಾರರು ಎಳನೀರು ಮಾರಾಟ ಮಾಡುತ್ತಾರೆ. ತೋಟಗಳಿಗೆ ಬಂದು ವ್ಯಾಪಾರಿಗಳು ಎಳನೀರು ಖರೀದಿ ಮಾಡುವುದರಿಂದ ತೆಂಗಿನಕಾಯಿ ಕಡಿಮೆಯಾಗಿದೆ. ರೋಗ, ತಾಪಮಾನ ಇತರೆ ಕಾರಣಗಳಿಂದಲೂ ಇಳುವರಿ ಕುಸಿತವಾಗಿ ಬೇಡಿಕೆ ಹೆಚ್ಚಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular