HomeLatest NewsBig Breaking; ಡಾ. ಶಾಲಿನಿ ರಜನೀಶ್ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ

Big Breaking; ಡಾ. ಶಾಲಿನಿ ರಜನೀಶ್ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಬಂಧಿಸಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ವಿರುದ್ಧದ ಆರೋಪಗಳಿಗೆ ಅವರು ಕ್ಷಮೆ ಕೇಳಿದ್ದಾರೆ.

ಶನಿವಾರ ಈ ಕುರಿತು ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, “ಬೆಂಗಳೂರಿನ ಸೈಬರ್ ಠಾಣೆಯಲ್ಲಿ ವಿಚಾರಣೆ ಮುಗಿಸಿಕೊಂಡು ಬಂದೆ. ವಿಚಾರಣೆ ಸಂದರ್ಭದಲ್ಲಿ ವಿನೋದ್ ಎಂಬಾತ, ಶ್ರೀಮತಿ ಶಾಲಿನಿ ರಜನೀಶ್ ರವರ ಬಗ್ಗೆ ಸುಳ್ಳು ನನಗೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ, ಆದ್ದರಿಂದ ನನ್ನಿಂದಾಗಿರುವ ತಪ್ಪಿಗಾಗಿ ಶ್ರೀಮತಿ ಶಾಲಿನಿ ರಜನೀಶ್ ರವರಲ್ಲಿ ಕ್ಷಮೆ ಕೋರುತ್ತೇನೆ” ಎಂದು ಹೇಳಿದ್ದಾರೆ.

ಮಾಡಿದ್ದ ಆರೋಪವೇನು?: ಸ್ನೇಹಮಯಿ ಕೃಷ್ಣ ಮೂರು ಆರೋಪಗಳನ್ನು ಮಾಡುವ ಮೂಲಕ ಸುದ್ದಿಯಾಗಿದ್ದರು. ಅವರ ಮೊದಲ ಆರೋಪ ಮುಡಾ ಮಾಜಿ ಆಯುಕ್ತ ನಟೇಶ್ ಬಡ್ತಿ ಪಡೆಯಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 1.60 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂಬುದಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಆರೋಪಕ್ಕೆ ಪೂರಕವಾಗಿ ಸ್ನೇಹಮಯಿ ಕೃಷ್ಣ ಅವರು ಈ ಹಣವನ್ನು ಹೇಗೆ ಸಾಗಿಸಲಾಯಿತು? ಎಂದು ಕಾರಿನ ಭಾವಚಿತ್ರವನ್ನೂ ಅವರು ಬಿಡುಗಡೆ ಮಾಡಿದ್ದರು. ಈ ವಿಚಾರ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.

ಎರಡು ದಿನದ ಹಿಂದೆ ಪೋಸ್ಟ್ ಹಾಕಿದ್ದ ಸ್ನೇಹಮಯಿ ಕೃಷ್ಣ, ‘ನಟೇಶ್ ರವರು ಅಕ್ರಮ ಹಣ ವರ್ಗಾವಣೆ ಮಾಡಿರುವ ಮತ್ತು ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಲಂಚ ನೀಡಿರುವ ಸಂಬಂಧ ಆದಾಯ ತೆರಿಗೆ ಇಲಾಖೆಗೆ, ಜಾರಿ ನಿರ್ದೇಶನಾಲಯಕ್ಕೆ ನೀಡಿದ ದೂರರ್ಜಿಗಳು’ ಎಂದು ಹಲವಾರು ದಾಖಲೆಗಳನ್ನು ಪೋಸ್ಟ್ ಮಾಡಿದ್ದರು.

4 ದಿನದ ಹಿಂದಿನ ಪೋಸ್ಟ್‌ನಲ್ಲಿ ಅವರು, ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾದ ಡಿ.ಬಿ.ನಟೇಶ್ ರವರು, ಬಡ್ತಿ ಪಡೆಯುವ ಸಲುವಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಕೋಟ್ಯಾಂತರ ರೂಪಾಯಿ ಹಣ ಕೊಡುತ್ತಿದ್ದಾರೆ, ಈ ಹಣದ ವ್ಯವಹಾರ ದಿನಾಂಕ 09.02.2026 ರಂದು, ಮೈಸೂರಿನಲ್ಲಿ ನಡೆಯುತ್ತಿದೆ, ಶ್ರೀಮತಿ ಶಾಲಿನಿ ರಜನೀಶ್ ಕಡೆಯವರು ಮೈಸೂರಿಗೆ ಬಂದು ಹಣ ಪಡೆಯುತ್ತಿದ್ದಾರೆ, ಯಾವ ಸಂಖ್ಯೆಯ ವಾಹನದಲ್ಲಿ ಹಣ ವರ್ಗಾವಣೆ ಆಗುತ್ತಿದೆ, ಮುಂತಾದ ಮಾಹಿತಿ ದೊರೆತಿತ್ತು’ ಎಂದು ಹೇಳಿದ್ದರು.

‘ನಾನು ಬೆಂಗಳೂರಿನಲ್ಲಿ ಇದ್ದುದ್ದರಿಂದ ಮತ್ತು ಸ್ಪಷ್ಟವಾದ ಸ್ಥಳದ ಮಾಹಿತಿ ದೊರೆತಿರಲಿಲ್ಲವಾದ್ದರಿಂದ, ಆ ಕೂಡಲೇ ಈ ಹಣದ ವಹಿವಾಟನ್ನು ಪತ್ತೆ ಮಾಡಲಾಗಲಿಲ್ಲ. ಇದಾದ ನಾಲ್ಕು ದಿನಗಳಲ್ಲೇ ನಟೇಶ್ ರವರಿಗೆ ಬಡ್ತಿ ನೀಡಲಾಗಿದೆ ! ಈ ಬಗ್ಗೆ ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಸ್ಪಷ್ಟೀಕರಣ ಕೋರಿ ಕಳುಹಿಸಿದ ಮನವಿ ಪತ್ರ’ ಎಂದು ಪೋಸ್ಟ್ ಒಂದನ್ನು ಹಾಕಿದ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಬೆಳಕಿಗೆ ತಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದ ಸ್ನೇಹಮಯಿ ಕೃಷ್ಣ ಬಂಧನ ರಾಜಕೀಯ ಪ್ರೇರಿತ ಎಂದು ಪ್ರತಿಪಕ್ಷಗಳು ಆರೋಪವನ್ನು ಮಾಡುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular