HomeLatest Newsಹಾವು ಕಡಿದು ಸಾವು ಪ್ರಕರಣ: ಕರ್ನಾಟಕ ದೇಶದಲ್ಲಿಯೇ ನಂಬರ್ 1 ಸ್ಥಾನದಲ್ಲಿ: ಆತಂಕಕಾರಿ ಮಾಹಿತಿ ಬಹಿರಂಗ

ಹಾವು ಕಡಿದು ಸಾವು ಪ್ರಕರಣ: ಕರ್ನಾಟಕ ದೇಶದಲ್ಲಿಯೇ ನಂಬರ್ 1 ಸ್ಥಾನದಲ್ಲಿ: ಆತಂಕಕಾರಿ ಮಾಹಿತಿ ಬಹಿರಂಗ

ಬೆಂಗಳೂರು: ಹವು ಕಡಿತದ ಪ್ರಕರಣದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗವಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 277 ಜನರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಕಳೆದ ಮೂರು ವರ್ಷಗಳಲ್ಲಿ ಅಂದರೆ 2023 ರಿಂದ 2026ರ ಅವಧಿಯಲ್ಲಿ ರಾಅಜ್ಯದಲ್ಲಿ ಅತಿ ಹೆಚ್ಚು ಸರ್ಪ ಕಚ್ಚಿದ ಪ್ರಕರಣಗಳು ಮತ್ತು ಸಾವುಗಳ ವರದಿಯಾಗಿವೆ. ಇದು ಇತರ ರಾಜ್ಯಗಳಿಗಿಂತ ಹೆಚ್ಚಿನ ಸಂಖ್ಯೆಯಾಗಿದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಭಾಗದ ಜನರು. ಜಮೀನುಗಳಲ್ಲಿ ಕೆಲಸ ಮಾಡುವಾಗ ಅಥವಾ ರಾತ್ರಿ ವೇಳೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಸಂಚರಿಸುವಾಗ ಈ ಘಟನೆಗಳು ನಡೆದಿವೆ.

ಹಾವಿನ ಕಡಿತಕ್ಕೆ ಒಳಗಾದ ನಂತರ ಸಕಾಲದಲ್ಲಿ ‘ಆಂಟಿ-ವೆನಮ್’ (ವಿಷನಿರೋಧಕ ಚುಚ್ಚುಮದ್ದು) ಸಿಗದಿರುವುದು ಮತ್ತು ನಾಟಿ ಔಷಧಿಗಳ ಮೊರೆ ಹೋಗುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾವು ಕಡಿತದ ಸಂದರ್ಭದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆ ಮತ್ತು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳುವ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP) ನಿಂದ ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪೋರ್ಟಲ್ (IHIP) ಮೂಲಕ ಪಡೆದ ಅಂಕಿಅಂಶಗಳ ಪ್ರಕಾರ, ಕರ್ನಾಟಕವು 2023 ರಲ್ಲಿ 19 ಸಾವುಗಳು, 2024 ರಲ್ಲಿ 101 ಮತ್ತು 2025 ರಲ್ಲಿ 157 ಸಾವುಗಳನ್ನು ವರದಿ ಮಾಡಿದೆ ಎಂದು ತೋರಿಸುತ್ತದೆ. ಇದು ಮೂರು ವರ್ಷಗಳಲ್ಲಿ 277 ಸಾವುಗಳಿಗೆ ಕಾರಣವಾಗಿದೆ, ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಸಾವು ಎಂದು ಹೇಳಲಾಗಿದೆ. ಇದರ ನಂತರ ಪಶ್ಚಿಮ ಬಂಗಾಳ ಎರಡನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ 153 ಸಾವುಗಳು ಸಂಭವಿಸಿದೆ. 2023 ರಲ್ಲಿ 43 ಸಾವುಗಳು ತಮಿಳುನಾಡಿನಲ್ಲಿ ಆಗಿದೆ.

ಹಾವುಗಳನ್ನು ಒಳಗೊಂಡ ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಮಾರ್ಚ್ 21, 2023 ರಂದು ಬಿಡುಗಡೆಯಾದ ಜಾತಿ-ನಿರ್ದಿಷ್ಟ ಮಾರ್ಗಸೂಚಿಗಳನ್ನು ಮತ್ತು ಫೆಬ್ರವರಿ 2021 ರ ಹಿಂದಿನ ಸಲಹೆಯನ್ನು ಸಹ ಇದು ಉಲ್ಲೇಖಿಸಿದೆ, ಇದು ಸಂಘರ್ಷದ ತಾಣ ಗುರುತು ಮಾಡುವುದು ಹಾಗೂ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಯೋಜಿಸುವುದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸುವುದನ್ನು ಶಿಫಾರಸು ಮಾಡಿದೆ, ಕರ್ನಾಟಕದಲ್ಲಿ ಅರಣ್ಯ ವ್ಯಾಪ್ತಿ ಮತ್ತು ವಿಷಕಾರಿ ಪ್ರಭೇದಗಳ ಸಾಂದ್ರತೆ ಗಣನೀಯವಾಗಿದೆ. ಕರ್ನಾಟಕದಲ್ಲಿ ಅರಣ್ಯ ವ್ಯಾಪ್ತಿ ಮತ್ತು ವಿಷಕಾರಿ ಪ್ರಭೇದಗಳ ಸಾಂದ್ರತೆ ಗಣನೀಯವಾಗಿದೆ ಎಂದು ವರದಿಗಳುತಿಳಿಸಿವೆ.

ಹಾವು ಕಡಿತ ಪ್ರಕರಣದಲ್ಲಿ ಬೆಳಗಾವಿ, ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಭಾಗಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ಇನ್ನು ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ 277, ಪಶ್ಚಿಮ ಬಂಗಾಳ 153, ತಮಿಳುನಾಡು 95, ಒಡಿಶಾ 84, ಜಾರ್ಖಂಡ್ 65, ಆಂಧ್ರಪ್ರದೇಶ 59, ಮಧ್ಯಪ್ರದೇಶ 51, ಜಮ್ಮು-ಕಾಶ್ಮೀರ 37, ಮಹಾರಾಷ್ಟ್ರ 34, ಅಸ್ಸಾಂ 32 ಪ್ರಕರಣಗಳು ದಾಖಲಾಗಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular