HomeHealthಹಾವು ಕಡಿತ ಮೊದಲು ಏನು ಮಾಡಬೇಕು?, ಮುನ್ನೆಚ್ಚೆರಿಕೆ ಕ್ರಮಗಳು

ಹಾವು ಕಡಿತ ಮೊದಲು ಏನು ಮಾಡಬೇಕು?, ಮುನ್ನೆಚ್ಚೆರಿಕೆ ಕ್ರಮಗಳು

“ಹಾವು ಕಡಿತದಿಂದ ಉಂಟಾಗುವ ಜೀವ ಹಾನಿಯನ್ನು ತಡೆಗಟ್ಟಲು ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸಬೇಕು” ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿದರು.

“ನಮ್ಮ ಭಾರತ ಹೆಚ್ಚು ಹಳ್ಳಿಗಳನ್ನು ಹೊಂದಿರುವ ದೇಶ ಮತ್ತು ಶೇ.70ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ಅವಲಂಬಿತರಾಗಿದ್ದಾರೆ. ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ಹಾವುಗಳ ತಿರುಗಾಟ ಹೆಚ್ಚಿರುತ್ತದೆ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಕೃಷಿ ಮತ್ತು ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂತಹ ಕೃಷಿ ಕುಲಕಸುಬುಗಳಲ್ಲಿ ತೊಡಗಿರುವ ರೈತರು ಮತ್ತು ಗ್ರಾಮೀಣ ಭಾಗದ ಜನರಿಗೆ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣಗಳ ಕುರಿತು ಅರಿವು ಮೂಡಸಬೇಕು” ಎಂದು ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮಗಳು

  • ಮನೆಗಳ ಸುತ್ತ ಮುತ್ತಲಿನ ತಾಣಗಳಲ್ಲಿ ಕಸದ ರಾಸಿ ಇದ್ದರೆ ಅದು ಹೆಚ್ಚು ಹಾವುಗಳನ್ನು ಆಕರ್ಷಿಸುತ್ತದೆ. ಗಿಡಗಂಟೆಗಳು ತುಂಬಿದ ದಾರಿ ಹಾವು ಕಡಿತದ ಅಪಾಯವನ್ನು ಹೆಚ್ಚಿಸುತ್ತದೆ.
  • ಸಾರ್ವಜನಿಕರು ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
  • ಹಾವು ಕಡಿತಕ್ಕೆ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ 24*7 ಚಿಕಿತ್ಸೆಯನ್ನು ನೀಡಲು ಎಲ್ಲಾ ಆಸ್ಪತ್ರೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು.
  • ಹಾವು ಕಡಿದಲ್ಲಿ ಯಾವುದೇ ನಾಟಿ ವೈದ್ಯರ ಬಳಿ ಹೋಗದೇ 40 ನಿಮಿಷದೊಳಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯಬೇಕು.
  • ರಾತ್ರಿ ಸಮಯದಲ್ಲಿ ಮನೆಯ ಹೊರಗಡೆ ನೆಲದ ಮೇಲೆ ಮಲಗುವುದರಿಂದ ಹಾವು ಅಥವಾ ಇತರೆ ಕೀಟಗಳು ಸಂಚರಿಸಬಹುದು. ಹಾಗಾಗಿ ಮೇಜು, ದಿವಾನ ಕಾಟ್, ಕಟ್ಟೆ ಅಥವಾ ಎತ್ತರ ಸ್ಥಳಗಳಲ್ಲಿ ಮಲಗುವುದು ಸೂಕ್ತ.
  • ಬೆಳಕು ಇಲ್ಲದೇ ಬರಿಗಾಲಲ್ಲಿ ನಡೆಯುವುದು ಹಾವು ಕಡಿತದ ಸಂಭವವನ್ನು ಹೆಚ್ಚಿಸುತ್ತದೆ. ಆದ್ದರಿಂದ ರಾತ್ರಿ ಸಮಯದಲ್ಲಿ ಜಾಗೃತಿ ವಹಿಸಿ.
  • ಸೌದೆಗಳ ಕಟ್ಟನ್ನು ಪರಿಶೀಲಿಸದೇ ಎತ್ತುವುದು ಅಪಾಯಕಾರಿ. ಇವುಗಳಲ್ಲಿ ಹಾವುಗಳು ಸೇರಿಕೊಂಡಿರುವ ಸಾಧ್ಯತೆ ಇರುತ್ತದೆ.
  • ಮನೆ ಸುತ್ತಮುತ್ತ ಗಿಡಗಂಟೆಗಳನ್ನು ಚಿಕ್ಕದಾಗಿ ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಡೆದಾಡುವ ದಾರಿಗಳನ್ನು ಕಳೆ ಮುಕ್ತ ಮಾಡುವದರಿಂದ ಹಾವಿನ ಕಡಿತವನ್ನು ಕಡಿಮೆ ಮಾಡಬಹುದು.
  • ರಾತ್ರಿ ಸಮಯದಲ್ಲಿ ಓಡಾಡುವಾಗ ಟಾರ್ಚ್‌ ಉಪಯೋಗಿಸಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಹೆಚ್ಚು ಸುರಕ್ಷಿತ.
  • ರೈತರು ಹಾವಿನ ಕಡಿತದಿಂದ ರಕ್ಷಿಸಿಕೊಳ್ಳಲು ರಬ್ಬರ್ ಬೂಟ್ ಉಪಯೋಗಿಸಬೇಕು. ಹೊಲ ಗದ್ದೆಗಳನ್ನು ಕಳೆಗಳಿಂದ ಸ್ವಚ್ಛವಾಗಿರಿಸಬೇಕು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular