HomeBusinessಬೆಂಗಳೂರಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ ₹5,500 ಏರಿಕೆ:ಬೆಳ್ಳಿ ಬೆಲೆ ತಟಸ್ಥ

ಬೆಂಗಳೂರಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ ₹5,500 ಏರಿಕೆ:ಬೆಳ್ಳಿ ಬೆಲೆ ತಟಸ್ಥ

ಬೆಂಗಳೂರು: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದಲ್ಲಿ ಈ ಸುದ್ದಿ ನಿಮಗಾಗಿ. ಕಳೆದ ಗುರುವಾರವಷ್ಟೇ ಕೊಂಚ ಇಳಿಕೆಯಾಗಿ ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರಿಗೆ ಇಂದು ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೌದು, ಸಿಲಿಕಾನ್ ಸಿಟಿಯಲ್ಲಿ ಹಳದಿ ಲೋಹದ ಬೆಲೆ ಗಗನಕ್ಕೇರುತ್ತಿದೆ.

ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ಜಾಗತಿಕ ರಾಜಕೀಯ ವಿದ್ಯಮಾನಗಳು ಚಿನ್ನದ ಮೇಲೆ ನೇರ ಪ್ರಭಾವ ಬೀರಲಿವೆ ಎನ್ನುವುದಕ್ಕೆ ಇದೇ ಸಾಕ್ಷಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯಿಂದಾಗಿ ಚಿನ್ನದ ಬೆಲೆ ಭಾರವಾಗುತ್ತಿದೆ. ಅಮೆರಿಕ ಸುಪ್ರೀಂ ಕೋರ್ಟ್ ಟ್ರಂಪ್ ಅವರ ಹೆಚ್ಚುವರಿ ಸುಂಕವನ್ನು ರದ್ದುಗೊಳಿಸಿದಾಗಿನಿಂದ ಬೆಲೆ ಏರಿಕೆಯಲ್ಲಿ ಬಿರುಗಾಳಿ ಎದ್ದಿದೆ. ಈ ಆದೇಶದಿಂದಾಗಿ ಜಾಗತಿಕ ವ್ಯಾಪಾರದಲ್ಲಿ ಅಸ್ಥಿರತೆ ಉಂಟಾಗಿದ್ದು, ಡಾಲರ್ ಮೌಲ್ಯ ಕುಸಿದಿದೆ. ಇದರ ನೇರ ಲಾಭ ಚಿನ್ನಕ್ಕೆ ಸಿಕ್ಕಿದ್ದು, ಬೆಲೆಯು ಏರಿಕೆಯ ಹಾದಿಯಲ್ಲಿದೆ.

ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು? (ಫೆಬ್ರವರಿ 27, 2026)
ನಿನ್ನೆ ಒಂದೇ ದಿನ 870 ರೂಪಾಯಿ ಇಳಿಕೆಯಾಗಿದ್ದ ಚಿನ್ನದ ದರ, ಇಂದು ಮತ್ತೆ ಭಾರಿ ಏರಿಕೆ ಕಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರೆಟ್ ಚಿನ್ನ (10 ಗ್ರಾಂ): ಇಂದು ಬರೋಬ್ಬರಿ 550 ರೂಪಾಯಿ ಹೆಚ್ಚಳವಾಗಿದ್ದು, ಒಟ್ಟು ಬೆಲೆ 1,61,570 ರೂಪಾಯಿಗೆ ತಲುಪಿದೆ.

1 ಗ್ರಾಂ ಬೆಲೆ: ಇಂದಿನ ದರ 16,157 ರೂಪಾಯಿ.ಕಳೆದ ಐದಾರು ದಿನಗಳಲ್ಲಿ ಬಹುತೇಕ ದಿನಗಳು ದಾಖಲೆ ಮಟ್ಟಕ್ಕೆ ಬೆಲೆ ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ.

ಬೆಳ್ಳಿ ದರ

ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಏರುತ್ತಿದ್ದರೆ, ಬೆಳ್ಳಿ ಬೆಲೆ ಮಾತ್ರ ಸದ್ಯಕ್ಕೆ ಗ್ರಾಹಕರಿಗೆ ಸಣ್ಣ ನಿರಾಳತೆ ನೀಡಿದೆ. ಹಳದಿ ಲೋಹದ ಬೆಲೆಯಲ್ಲಿನ ಬಿರುಗಾಳಿಯ ನಡುವೆಯೂ ಶ್ವೇತ ಲೋಹದ ಬೆಲೆ ಇಂದು ಯಾವುದೇ ಏರಿಳಿತ ಕಾಣದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಇಂದಿನ ಬೆಳ್ಳಿ ದರ ಪಟ್ಟಿ (ಫೆಬ್ರವರಿ 27, 2026)
ನೆನ್ನೆಯ ದರವೇ ಇಂದೂ ಮುಂದುವರಿದಿದ್ದು, ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಹೀಗಿದೆ:

1 ಗ್ರಾಂ: 285 ರೂ.

10 ಗ್ರಾಂ: 2,850 ರೂ.

100 ಗ್ರಾಂ: 28,500 ರೂ.

1 ಕೆ.ಜಿ ಬೆಳ್ಳಿ: 2,85,000 ರೂ.

24 ಕ್ಯಾರೆಟ್ ಚಿನ್ನದ ಬೆಲೆ:

ತೂಕನಿನ್ನೆ ಬೆಲೆ (₹)ಇಂದು ಬೆಲೆ (₹)ಏರಿಕೆ (₹)
1 ಗ್ರಾಂ16,10216,15755
10 ಗ್ರಾಂ1,61,0201,61,570550
100 ಗ್ರಾಂ16,10,20016,15,7005,500

ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ(24 ಕ್ಯಾರೆಟ್ ಚಿನ್ನದ ದರ (1 ಗ್ರಾಂ)

ಬೆಂಗಳೂರು₹16,157

ಮುಂಬೈ₹16,157

ಕೋಲ್ಕತ್ತಾ₹16,157

ಹೈದರಾಬಾದ್₹16,157

ಕೇರಳ₹16,157

ಪುಣೆ₹16,157

ಚೆನ್ನೈ₹16,255

ದೆಹಲಿ₹16,172

ಅಹಮದಾಬಾದ್₹16,162

ವಡೋದರಾ₹16,162

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular