HomeKarnatakaಹಾವು ಕಡಿದು 7 ವರ್ಷದ ಬಾಲಕಿ ದುರ್ಮರಣ

ಹಾವು ಕಡಿದು 7 ವರ್ಷದ ಬಾಲಕಿ ದುರ್ಮರಣ

ಬೆಂಗಳೂರು: ಹಾವು ಕಡಿದು 7 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

ಅನುಷಾ (7) ಮೃತ ಬಾಲಕಿ. ಅನುಷಾ ತಂದೆ-ತಾಯಿ ಕೋಳೂರು ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬಾಲಕಿ ಕೂಡ ತೋಟಕ್ಕೆ ಬಂದಿದ್ದು, ಆಟವಾಡುತ್ತಿದ್ದಳು. ಈ ವೇಳೆ ಬಾಲಕಿಗೆ ಹಾವು ಕಚ್ಚಿದೆ.

ತಕ್ಷಣ ಬಾಲಕಿಯನ್ನು ದೊಡ್ಡಬಳ್ಳಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular