ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಕಳೆಗಟ್ಟುತ್ತಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ್ತಿಯರು ಮೈದಾನದ ಹೊರಗೂ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ತಂಡದ ವಿಶೇಷ ಕಾರ್ಯಕ್ರಮವೊಂದರಲ್ಲಿ ನಾಯಕಿ ಸ್ಮೃತಿ ಮಂಧಾನ, ಇಂಗ್ಲೆಂಡ್ನ ವೇಗಿ ಲಾರೆನ್ ಬೆಲ್ ಸೇರಿದಂತೆ ಹಲವು ಆಟಗಾರ್ತಿಯರು ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ವಿಶೇಷವಾಗಿ ಸ್ಮೃತಿ ಮಂಧಾನ ಅವರ ಸ್ಟೈಲಿಶ್ ಉಡುಗೆ ಮತ್ತು ಎಲಿಗಂಟ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ. ತಂಡದ ಒಗ್ಗಟ್ಟು ಕೇವಲ ಮೈದಾನದಲ್ಲಿ ಮಾತ್ರವಲ್ಲದೆ ಇಂತಹ ಕಾರ್ಯಕ್ರಮಗಳಲ್ಲೂ ಎದ್ದು ಕಾಣುತ್ತಿದ್ದು, ಆರ್ಸಿಬಿ ಆಟಗಾರ್ತಿಯರು ಸ್ಟೈಲ್ ಐಕಾನ್ಗಳಾಗಿ ಹೊರಹೊಮ್ಮುತ್ತಿದ್ದಾರೆ.
ವಡೋದರಾದಲ್ಲಿ ಆಟಗಾರ್ತಿಯರಿಗೆ ಎದುರಾದ ಕಹಿ ಅನುಭವ ಆದರೆ, ಈ ಖುಷಿಯ ನಡುವೆಯೇ ಆತಂಕಕಾರಿ ಘಟನೆಯೊಂದು ನಡೆದಿದೆ. ವಡೋದರಾದಲ್ಲಿ ಆರ್ಸಿಬಿ ಆಟಗಾರ್ತಿಯರಾದ ಲಾರೆನ್ ಬೆಲ್ ಮತ್ತು ಅವರ ತಂಡದವರು ರಸ್ತೆಯಲ್ಲಿ ಜಾಗಿಂಗ್ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಅವರನ್ನು ಬೆನ್ನಟ್ಟಿರುವ ವೀಡಿಯೋ ಹೊರಬಿದ್ದಿದೆ. ಭದ್ರತಾ ಸಿಬ್ಬಂದಿ ಇಲ್ಲದ ಸಮಯದಲ್ಲಿ ಆಟಗಾರ್ತಿಯರು ಜಾಗಿಂಗ್ ಮಾಡುತ್ತಿರುವುದನ್ನು ಕಂಡ ವ್ಯಕ್ತಿ, ಅವರನ್ನು ಹಿಂಬಾಲಿಸುತ್ತಾ ವೀಡಿಯೋ ರೆಕಾರ್ಡ್ ಮಾಡಿದ್ದಾನೆ.
ಈ ಘಟನೆಯಿಂದ ಆಟಗಾರ್ತಿಯರು ಮುಜುಗರಕ್ಕೊಳಗಾಗಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಅಭಿಮಾನದ ಹೆಸರಿನಲ್ಲಿ ಮಹಿಳಾ ಅಥ್ಲೀಟ್ಗಳ ಖಾಸಗಿತನಕ್ಕೆ ಧಕ್ಕೆ ತರುವುದು ಮತ್ತು ಅವರನ್ನು ಬೆನ್ನಟ್ಟುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಗಾರ್ತಿಯರ ಸುರಕ್ಷತೆ ಮತ್ತು ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಗೌರವ ನೀಡಬೇಕು ಎಂಬ ಚರ್ಚೆ ಈಗ ಗಟ್ಟಿಯಾಗಿ ಕೇಳಿಬರುತ್ತಿದೆ.

