HomeLatest NewsSHOCKING : 'ಪ್ಯಾಂಟ್ ಜೇಬಿ'ನಿಂದ ಹೊಗೆ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಸ್ಫೋಟ ; ಭಯಾನಕ...

SHOCKING : ‘ಪ್ಯಾಂಟ್ ಜೇಬಿ’ನಿಂದ ಹೊಗೆ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಸ್ಫೋಟ ; ಭಯಾನಕ ವೀಡಿಯೋ ವೈರಲ್ |WATCH VIDEO

ಮೊಬೈಲ್ ಫೋನ್ ಪ್ರಸ್ತುತ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಫೋನ್ ಇಲ್ಲದೆ ಜನರು ಒಂದು ನಿಮಿಷವೂ ಇರಲು ಸಾಧ್ಯವಾಗುತ್ತಿಲ್ಲ. ಈ ಮೊಬೈಲ್‌ನಿಂದ ನಮಗೆ ಎಷ್ಟು ಲಾಭಗಳಿವೆಯೋ, ಅದೇ ಪ್ರಮಾಣದಲ್ಲಿ ನಷ್ಟಗಳೂ ಇವೆ. ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಇದಕ್ಕೆ ಸಾಕ್ಷಿ. ಅಸಲಿಗೆ ಏನಾಯಿತು ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ.

ರಾಜಸ್ಥಾನದ ಜೋಧ್‌ಪುರದ ಮಂಡೋರ್ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ದಿಢೀರನೆ ಸ್ಫೋಟಗೊಂಡಿದೆ. ವ್ಯಾಪಾರಿ ಕೆಲಸದಲ್ಲಿ ನಿರತರಾಗಿದ್ದಾಗ ಅವರ ಜೇಬಿನಲ್ಲಿದ್ದ ಫೋನ್ ಸ್ಫೋಟಗೊಂಡಿದ್ದು, ಪ್ಯಾಂಟ್‌ನಿಂದ ಹೊಗೆ ಬರಲು ಪ್ರಾರಂಭಿಸಿದೆ. ಕ್ಷಣಾರ್ಧದಲ್ಲೇ ಆ ಹೊಗೆ ಕೊಠಡಿಯಾದ್ಯಂತ ಹರಡಿದೆ.

ಸ್ಫೋಟದ ತೀವ್ರತೆಗೆ ಗಾಯಗೊಂಡ ವ್ಯಾಪಾರಿ ನೋವಿನಿಂದ ಕಿರುಚಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ನೀಡಿದ್ದು, ಪ್ರಸ್ತುತ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಅಧಿಕ ಬಿಸಿಲಿನಿಂದ ಫೋನ್ ಅತಿಯಾಗಿ ಬಿಸಿಯಾಗುವುದು ಅಥವಾ ಬ್ಯಾಟರಿಯಲ್ಲಿನ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಫೋನ್ ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

  • ಫೋನ್ ಅನ್ನು ನೇರ ಸೂರ್ಯನ ಬಿಸಿಲಿನಲ್ಲಿ ಇಡಬೇಡಿ.
  • ಅತಿಯಾದ ಶಾಖವಿರುವ ಸ್ಥಳಗಳಲ್ಲಿ ಫೋನ್ ಇಡಬೇಡಿ.
  • ಬ್ಯಾಟರಿ ಉಬ್ಬಿದಂತೆ ಕಂಡುಬಂದರೆ ತಕ್ಷಣ ಬದಲಾಯಿಸಿ.
  • ಫೋನ್ ಚಾರ್ಜಿಂಗ್‌ಗೆ ಹಾಕಿರುವಾಗ ಅದನ್ನು ಬಳಸಬೇಡಿ.
  • ರಾತ್ರಿ ಮಲಗುವಾಗ ಫೋನ್ ಅನ್ನು ದಿಂಬಿನ ಅಡಿಯಲ್ಲಿ ಅಥವಾ ಗಾಳಿ ಆಡದ ಮುಚ್ಚಿದ ಸ್ಥಳಗಳಲ್ಲಿ ಇಡಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

View this post on Instagram

A post shared by NEWS9 (@news9live)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular