HomeEntertainment'ಸ್ಲಮ್ ಡಾಗ್ - 33 ಟೆಂಪಲ್ ರೋಡ್': ಹಸಿವು ಮತ್ತು ಕಣ್ಣೀರಿನ ಕಥೆ ಹೇಳಲು ಬಂದ...

‘ಸ್ಲಮ್ ಡಾಗ್ – 33 ಟೆಂಪಲ್ ರೋಡ್’: ಹಸಿವು ಮತ್ತು ಕಣ್ಣೀರಿನ ಕಥೆ ಹೇಳಲು ಬಂದ ಜರೀನಾ ವಹಾಬ್!

ದಕ್ಷಿಣ ಭಾರತೀಯ ಚಿತ್ರರಂಗದ ಮಾಸ್ ನಿರ್ದೇಶಕ ಪೂರಿ ಜಗನ್ನಾಥ್ ಅವರ ಮುಂಬರುವ ಬಹುನಿರೀಕ್ಷಿತ ‘ಸ್ಲಮ್ ಡಾಗ್ – 33 ಟೆಂಪಲ್ ರೋಡ್’ ಸಿನಿಮಾದಿಂದ ಪ್ರಮುಖ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಈ ಚಿತ್ರದಲ್ಲಿ ಹಿರಿಯ ಬಾಲಿವುಡ್ ನಟಿ ಜರೀನಾ ವಹಾಬ್ ಅತ್ಯಂತ ಸವಾಲಿನ ಹಾಗೂ ಭಾವನಾತ್ಮಕವಾಗಿ ಕಾಡುವಂತಹ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ವಿಶೇಷ ಲುಕ್‌ನ ವೀಡಿಯೋ ತುಣುಕನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ನಿರ್ದೇಶಕ ಪೂರಿ ಜಗನ್ನಾಥ್ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಚಿತ್ರತಂಡ ಈ ವೀಡಿಯೋ ಬಿಡುಗಡೆ ಮಾಡುವ ಮೂಲಕ ಶುಭಕೋರಿದೆ. ಜರೀನಾ ವಹಾಬ್ ಅವರು ‘ಜುಬೇದಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ನೋವು ಮತ್ತು ಕಷ್ಟದ ಪಯಣವನ್ನು ಈ ವೀಡಿಯೋದಲ್ಲಿ ಜಿಂಪ್ಸ್ ರೂಪದಲ್ಲಿ ತೋರಿಸಲಾಗಿದೆ. ಹಸಿವಿನ ಯಾತನೆ ತಾಳಲಾರದೆ ಬಡತನ ಹೇಗೆ ಒಬ್ಬರನ್ನು ಭಿಕ್ಷಾಟನೆಗೆ ತಳ್ಳುತ್ತದೆ ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ನಿರೂಪಿಸಲಾಗಿದೆ.

ಜರೀನಾ ವಹಾಬ್ ಅವರ ಕಣ್ಣೀರ ಧ್ವನಿ ಹಾಗೂ ತೀವ್ರ ಅಭಿನಯ ಪ್ರೇಕ್ಷಕರ ಮನಸ್ಸನ್ನು ತಲುಪುವಂತಿದೆ. ಇದರೊಂದಿಗೆ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಮೇಶ್ವರ್ ಅವರ ಹಿನ್ನೆಲೆ ಸಂಗೀತವು ದೃಶ್ಯಗಳ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ವೀಡಿಯೋಗೆ ಮತ್ತಷ್ಟು ಮೆರುಗು ನೀಡಿದೆ. ಈ ಸಣ್ಣ ವೀಡಿಯೋ ತುಣುಕೇ ಸಿನಿಮಾದ ಮೇಲಿನ ಕುತೂಹಲವನ್ನು ದ್ವಿಗುಣಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ‘ಸ್ಲಮ್ ಡಾಗ್ – 33 ಟೆಂಪಲ್ ರೋಡ್’ ಸಿನಿಮಾ ಶೀಘ್ರದಲ್ಲೇ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಬಹುಕೋಟಿ ವೆಚ್ಚದ ಸಿನಿಮಾವನ್ನು ಪೂರಿ ಜಗನ್ನಾಥ್, ಚಾರ್ಮಿ ಕೌರ್ ಹಾಗೂ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ದಕ್ಷಿಣ ಭಾರತ ಮತ್ತು ಬಾಲಿವುಡ್‌ನ ಪ್ರಸಿದ್ಧ ಕಲಾವಿದರ ದಂಡೇ ಇದೆ. ಸಂಯುಕ್ತಾ, ಹಿರಿಯ ನಟಿ ಟಬು, ಕನ್ನಡದ ಖ್ಯಾತ ನಟ ದುನಿಯಾ ವಿಜಯ್, ಬ್ರಹ್ಮಾಜಿ ಹಾಗೂ ವಿಟಿವಿ ಗಣೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular