HomeBeautyವಿಂಟರ್ ನಲ್ಲಿ ಹೀಗಿರಲಿ ತ್ವಚೆಯ ಕಾಳಜಿ

ವಿಂಟರ್ ನಲ್ಲಿ ಹೀಗಿರಲಿ ತ್ವಚೆಯ ಕಾಳಜಿ

ಚಳಿಗಾಲ ಬಂತೆಂದರೆ ಕ್ರೀಮ್ ಲೋಷನ್ ಗಳ ಸಂಖ್ಯೆ ಕಬೋರ್ಡ್ ಗಳಲ್ಲಿ ಹೆಚ್ಚಾಗುತ್ತದೆ.

ಯಾಕೆಂದರೆ ಅವುಗಳು ಇಲ್ಲದೆ ಹೊರ ಹೋಗಲು ಸಾಧ್ಯವಿಲ್ಲ. ಅದರ ಜೊತೆಗೆ ಮನೆಯಲ್ಲೇ ಸ್ವಲ್ಪ ಕೇರ್ ತೆಗೆದುಕೊಂಡರೆ ತ್ವಚೆಯ ಆರೋಗ್ಯ ಇನ್ನೂ ಚೆನ್ನಾಗಿರುತ್ತದೆ. ಇಲ್ಲಿವೆ ಚಳಿಗಾಲಕ್ಕೆ ಒಂದಿಷ್ಟು ಸಲಹೆಗಳು.

* ಚಳಿಗಾಲದಲ್ಲಿ ವಾರಕ್ಕೊಮ್ಮೆಯಾದರೂ ಎಣ್ಣೆ-ಸ್ನಾನ ಮಾಡಬೇಕು. ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಚಳಿಗಾಲದಲ್ಲಿ ಪಪ್ಪಾಯಿ, ಜೇನು, ಬಾದಾಮಿಯ ಫೇಸ್ ಪ್ಯಾಕ್‌ಗಳನ್ನು ಮಾಡಿಕೊಂಡರೆ ತ್ವಚೆ ಮೃದುವಾಗುತ್ತದೆ.

* ವಿಟಮಿನ್ ಎ ಮತ್ತು ಇ ಅಂಶ ಹೆಚ್ಚಿರುವ ಪಪ್ಪಾಯ, ಬಾದಾಮಿ, ಕ್ಯಾಪ್ಸಿಕಮ್, ಕ್ಯಾರೆಟ್, ಪಾಲಾಕ್ ಸೊಪ್ಪು, ಮೊಟ್ಟೆ, ಬೆಣ್ಣೆ ಇತ್ಯಾದಿಗಳನ್ನು ಆಹಾರ ಪದ್ದತಿಯಲ್ಲಿ ಸೇರಿಸಿ ಕೊಳ್ಳಬೇಕು.

* ದೇಹದಲ್ಲಿರುವ ನೀರಿನ ಅಂಶ ಮುಖದ ಕಾಂತಿಯ ಮೇಲೆ ಪರಿಣಾಮ ಬೀರುವುದರಿಂದ ಹೆಚ್ಚು ಹೆಚ್ಚು ನೀರು ಕುಡಿಯುವುದು ಅತ್ಯವಶ್ಯಕ. ಆದ್ದರಿಂದ ಪ್ರತಿದಿನವೂ ಸಾಕಷ್ಟು ನೀರನ್ನು ಕುಡಿಯುವುದು ಒಳ್ಳೆಯದು.

* ಚಳಿಗಾಲದಲ್ಲಿ ತುಂಬಾ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ. ಅದು ತ್ವಚೆಯಲ್ಲಿನ ತೇವಾವಂಶವನ್ನು ತೆಗೆಯುವುದರಿಂದ ಒಣ ತ್ವಚೆಗೆ ಕಾರಣವಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುವುದು ಉತ್ತಮ.

* ಸ್ನಾನ ಮಾಡುವ ಮೊದಲು ಸ್ವಲ್ಪ ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಬಳಸಿ ಸ್ಕ್ರಬ್ ಮಾಡುವುದು ಉತ್ತಮ. ಇದು ನಿರ್ಜೀವ ಜೀವಕೋಶಗಳನ್ನು ತೆಗೆದುಹಾಕಿ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

* ಚಳಿಗಾಲದಲ್ಲಿ ಕೂದಲು ಒಣಗುತ್ತದೆ ಮತ್ತು ಬಿರುಕುಂಟಾಗಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚುವುದು ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

Most Popular