HomeLatest Newsನಿರುದ್ಯೋಗಿಗಳಿಗೆ ಆಗಸ್ಟ್ 18 ರಿಂದ ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ

ನಿರುದ್ಯೋಗಿಗಳಿಗೆ ಆಗಸ್ಟ್ 18 ರಿಂದ ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಆಗಸ್ಟ್ 18 ರಿಂದ ಸೆ. 16 ರವರೆಗೆ 1 ತಿಂಗಳು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಕೋಕೊನಟ್ ಕ್ಯಾಸಲ್ಸ, ಫ್ರುಟ್ ಕೇಕ್, ಸ್ಪಾಂಜ್‌ಕೇಕ್, ಜೆಲ್‌ಕೇಕ್, ಬಟರ್ ಐಸಿಂಗ್, ಮಿಲ್ಕ ಬ್ರೆಡ್, ಪಪ್‌ಪೇಸ್ಟಿç, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ.

ಆಕಸ್ತರು ತರಬೇತಿ ಶುಲ್ಕ ರೂ. 4500/-ಗಳನ್ನು ಪಾವತಿಸಿ, ಆ.16 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವAತೆ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಪ್ರೋಫೆಸರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಜಯಶ್ರೀ ಎಸ್. -9449187763 ಮತ್ತು ಜಯಶಂಕರ-9686555897 ಇವರುಗಳನ್ನು ಸಂಪರ್ಕಿಸುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular