HomeEntertainmentಎರಡು ವಾರ ಪೂರೈಸಿದ ʼಸ್ಕಂದʼ ಸಿನಿಮಾ

ಎರಡು ವಾರ ಪೂರೈಸಿದ ʼಸ್ಕಂದʼ ಸಿನಿಮಾ

ಬೋಯಾಪತಿ ಶ್ರೀನು ನಿರ್ದೇಶನದ ರಾಮ್ ಪೋತಿನೇನಿ ಅಭಿನಯದ ‘ಸ್ಕಂದ’ ಸಿನಿಮಾ ಸೆಪ್ಟೆಂಬರ್ 28ರಂದು ವಿಶ್ವಾದ್ಯಂತ ತೆರೆಕಂಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ದೇಶದಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇದೀಗ ಎರಡು ವಾರಗಳನ್ನು ಪೂರೈಸಿದ್ದು, ಈ ಸಂತಸವನ್ನು ಚಿತ್ರತಂಡ ತನ್ನ ಅಧಿಕೃತ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ರಾಮ್ ಪೋತಿನೇನಿ ಸೇರಿದಂತೆ ಶ್ರೀ ಲೀಲಾ, ಸಾಯಿ ಮಂಜ್ರೇಕರ್, ಶ್ರೀಕಾಂತ್, ಶರತ್ ಲೋಹಿತಾಶ್ವ, ಪ್ರಭಾಕರ್ ಗೌತಮಿ ಹಾಗೂ ಇಂದ್ರಜ ತೆರೆ ಹಂಚಿಕೊಂಡಿದ್ದು ಊರ್ವಶಿ ರೌಟೆಲ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಹಾಗೂ ಜಿ ಸ್ಟುಡಿಯೋಸ್ ಬ್ಯಾನರ್ ನಡಿ ಶ್ರೀನಿವಾಸ ಚೆಟ್ಟೂರಿ ಮತ್ತು ಪವನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular