HomeKarnatakaಫೆ. 22 ರಿಂದ ಸಿರಿಗೆರೆಯಲ್ಲಿ ಸರಳ ತರಳಬಾಳು ಹುಣ್ಣಿಮೆ

ಫೆ. 22 ರಿಂದ ಸಿರಿಗೆರೆಯಲ್ಲಿ ಸರಳ ತರಳಬಾಳು ಹುಣ್ಣಿಮೆ

ಚಿತ್ರದುರ್ಗ: ಸಿರಿಗೆರೆಯಲ್ಲಿ ಈ ಬಾರಿ ಫೆಬ್ರವರಿ 22 ರಿಂದ 24ರ ವರೆಗೆ ಸರಳವಾಗಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ.

ಕ್ರೀಡಾ ಮೇಳ, ಗೋಷ್ಠಿ, ವಿಜ್ಞಾನ ಮೇಳ, ಪೀಠದ ಸಂಸ್ಥಾಪಕರಾದ ಮರುಳಸಿದ್ದರ ನಾಟಕ ಪ್ರದರ್ಶನ, ಕೊನೆಯ ದಿನ ಶ್ರೀಗಳ ಸದ್ಧರ್ಮ ಸಿಂಹಾಸನಾರೋಹಣ ನಡೆಯಲಿದೆ. ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ ಸರಳವಾಗಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸಲಾಗುವುದು. ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಇದೇ ಸಂದರ್ಭದಲ್ಲಿ ಮರುಳಸಿದ್ದ ಕಾವ್ಯ ಮತ್ತು ಮರುಳಸಿದ್ದಾಂತ ವಿಮರ್ಶಾ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular