HomeLatest NewsSinger Mangli : ಮತ್ತೊಂದು ವಿವಾದದಲ್ಲಿ ಗಾಯಕಿ ಮಂಗ್ಲಿ ; ಅಶ್ಲೀಲ ಹಾಡಿನ ಮೇಲೆ ಕೇಸ್...

Singer Mangli : ಮತ್ತೊಂದು ವಿವಾದದಲ್ಲಿ ಗಾಯಕಿ ಮಂಗ್ಲಿ ; ಅಶ್ಲೀಲ ಹಾಡಿನ ಮೇಲೆ ಕೇಸ್ ದಾಖಲು..!

ಬಾಲಿವುಡ್ ಐಟಂ ಬಾಂಬ್ ನೋರಾ ಫತೇಹಿ ನಟಿಸಿರುವ ಲೇಟೆಸ್ಟ್ ಸಾಂಗ್ ‘ಸರ್ಕೆ ಚುನರ್’ (Sarke Chunar) ತೀವ್ರ ವಿವಾದಕ್ಕೆ ಗುರಿಯಾಗಿದೆ. ಹಾಡಿನಲ್ಲಿ ಅಶ್ಲೀಲ ಪದಗಳು ಮತ್ತು ದ್ವಂದ್ವಾರ್ಥದ ಸಾಹಿತ್ಯವನ್ನು ಬಳಸಲಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರಿಗೆ ಹಲವು ದೂರುಗಳು ಸಲ್ಲಿಕೆಯಾಗಿದ್ದು, ನಟಿ ನೋರಾ ಫತೇಹಿ, ನಟ ಸಂಜಯ್ ದತ್, ನಿರ್ದೇಶಕ ಪ್ರೇಮ್, ಸಾಹಿತ್ಯಗಾರರು ಹಾಗೂ ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ.

ಹೌದು.  ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ‘ಕೆಡಿ: ದಿ ಡೆವಿಲ್’ (KD: The Devil) ಚಿತ್ರದ “ಸರ್ಕೆ ಚುನರ್” ಎಂಬ ವಿಶೇಷ ಹಾಡು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಹಾಡಿನಲ್ಲಿ ಅಶ್ಲೀಲತೆ ಹೆಚ್ಚಿದೆ ಎಂಬ ಆರೋಪದ ಮೇಲೆ ಗಾಯಕಿ ಮಂಗ್ಲಿ ಸೇರಿದಂತೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣವು ಅಶ್ಲೀಲತೆಯಿಂದ ಕೂಡಿದೆ ಹಾಗೂ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ನೆಟ್ಟಿಗರು ಮತ್ತು ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಮುಂಬೈ ಮೂಲದ ಖ್ಯಾತ ನ್ಯಾಯವಾದಿ ವಿನೀತ್ ಜಿಂದಾಲ್ ಅವರು ಈ ಹಾಡನ್ನು ನಿಷೇಧಿಸುವಂತೆ ಕೋರಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಈ ಹಾಡನ್ನು ಹಾಡಿರುವ ಗಾಯಕಿ ಮಂಗ್ಲಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಾಹಿತ್ಯಗಾರ ರಾಕಿಬ್ ಆಲಂ ಮತ್ತು ನಿರ್ದೇಶಕ ಪ್ರೇಮ್ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಗ್ಲಿ ಮೊದಲ ಹಿಂದಿ ಹಾಡಿಗೆ ವಿಘ್ನ

ಗಾಯಕಿ ಮಂಗ್ಲಿ ಹಾಡಿರುವ ಮೊದಲ ಹಿಂದಿ ಹಾಡು ಇದಾಗಿದೆ. ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮಂಗ್ಲಿ, “ನನ್ನ ಮೊದಲ ಹಿಂದಿ ಹಾಡು #Sarkechunar ಹಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ತೆಲುಗು ಮತ್ತು ಹಿಂದಿ ಎರಡೂ ಆವೃತ್ತಿಗಳನ್ನು ನಾನೇ ಹಾಡಿದ್ದೇನೆ. ತೆಲುಗು ಆವೃತ್ತಿಗೆ ಆಸ್ಕರ್ ವಿಜೇತ ಚಂದ್ರಬೋಸ್ ಸಾಹಿತ್ಯ ಬರೆದಿದ್ದಾರೆ. ಸಂಜಯ್ ದತ್ ಮತ್ತು ನೋರಾ ಫತೇಹಿ ಅವರಂತಹ ದಿಗ್ಗಜರಿರುವ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ್ದು ಖುಷಿ ತಂದಿದೆ” ಎಂದು ಬರೆದುಕೊಂಡಿದ್ದರು. ಆದರೆ ಹಾಡು ವಿವಾದಕ್ಕೀಡಾದ ಬೆನ್ನಲ್ಲೇ ಅವರು ತಮ್ಮ ಪೋಸ್ಟ್‌ನ ಕಾಮೆಂಟ್ ಬಾಕ್ಸ್ ಅನ್ನು ಆಫ್ ಮಾಡಿದ್ದಾರೆ.

ಹಣಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕೆ? – ನೆಟ್ಟಿಗರ ಪ್ರಶ್ನೆ

ಮಂಗ್ಲಿ ಈ ಹಿಂದೆಯೂ ಬೋನಾಲ ಹಾಡಿನ ಸಾಹಿತ್ಯದ ವಿಚಾರವಾಗಿ ವಿವಾದಕ್ಕೆ ಸಿಲುಕಿದ್ದರು. ಇದೀಗ ಈ ಹಾಡು ಅವರಿಗೆ ಮತ್ತಷ್ಟು ಸಂಕಷ್ಟ ತಂದಿದೆ. “ನೋರಾ ಫತೇಹಿ ಅಥವಾ ಸಂಜಯ್ ದತ್ ಅವರಿಗೆ ಈ ಹಾಡಿನ ಸಾಹಿತ್ಯ ಅಥವಾ ಅರ್ಥ ತಿಳಿಯದಿರಬಹುದು. ಆದರೆ ಡಿಪ್ಲೊಮಾ ಓದಿರುವ, ಹಿಂದಿ ಭಾಷೆ ತಿಳಿದಿರುವ ಮಂಗ್ಲಿ ಅವರಿಗೆ ತಾವು ಏನು ಹಾಡುತ್ತಿದ್ದೇವೆ ಎಂಬ ಅರಿವಿರುತ್ತದೆ. ಕೇವಲ ಹಣಕ್ಕಾಗಿ ಇಷ್ಟು ಕೆಳಮಟ್ಟದ ಸಾಹಿತ್ಯವಿರುವ ಹಾಡನ್ನು ಹಾಡಬೇಕಿತ್ತೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

‘ಕೆಡಿ: ದಿ ಡೆವಿಲ್’ ಚಿತ್ರದ ಹಾಡು

ಈ ವಿವಾದಿತ ಹಾಡು ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ (KD: The Devil) ಚಿತ್ರದ್ದಾಗಿದೆ. ‘ಆ್ಯಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ಸೋದರಳಿಯ ಧ್ರುವ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ನೋರಾ ಫತೇಹಿ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular