ನವದೆಹಲಿ: ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಒಂದೇ ದಿನ 18,200 ರೂಪಾಯಿ ಏರಿಕೆಯಾಗಿದ್ದು, ಕೆಜಿಗೆ 2,79,100 ರೂ.ಗೆ ತಲುಪಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
24 ಕ್ಯಾರಟ್ ಚಿನ್ನದ ದರ 1750 ರೂಪಾಯಿ ಹೆಚ್ಚಳವಾಗಿದ್ದು 1,46,400 ರೂಪಾಯಿಗೆ ತಲುಪಿದೆ. 10ಗ್ರಾಂ 22 ಕ್ಯಾರಟ್ ಚಿನ್ನದ ದರ 1,600 ರೂ. ಏರಿಕೆಯಾಗಿ 1,34,200 ರೂ.ಗೆ ಮಾರಾಟವಾಗಿದೆ.
ದೆಹಲಿ ಮಾರುಕಟ್ಟೆಯಲ್ಲಿ ಬೆಳ್ಳಿ ದರ 15,000 ರೂ. ಏರಿಕೆಯಾಗಿದ್ದು 2.65 ಲಕ್ಷ ರೂ.ಗೆ ತಲುಪಿದೆ. ಶೇ. 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 2,900 ರೂ. ಹೆಚ್ಚಳವಾಗಿದ್ದು 1,44,600 ರೂಪಾಯಿಗೆ ತಲುಪಿ ಸಾರ್ವಕಾಲಿಕ ದಾಖಲೆ ಪಟ್ಟಿಗೆ ಸೇರಿದೆ.

