ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿಗೆ ಜಲದಿಗ್ಬಂಧನ ಎದುರಾಗಿದ್ದು, ರಸ್ತೆಗಳು ಕೆರೆಯಂತಾಗಿದೆ.
ಕೆ ಆರ್ ಪುರಂ ನ ಸಾಯಿಲೇಔಟ್ ನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿದೆ. ಸಾಯಿ ಲೇಔಟ್ ನಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಕುಡಿಯಲು ನೀರಿಲ್ಲದೇ ತಿನ್ನಲು ಆಹಾರವಿಲ್ಲದೇ ಜನರು ಪರದಾಡುತ್ತಿದ್ದಾರೆ. ಮನೆಯಲ್ಲಿ ನೀರು ನಿಂತ ಪರಿಣಾಮ ಹಗಲು ರಾತ್ರಿ ಇಡೀ ಜನರು ಊಟ ನಿದ್ದೆಯಿಲ್ಲದೇ ನಿಂತು ಕಾಲ ಕಳೆಯುವಂತಾಗಿದೆ.
ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಾದ್ಯಂತ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ . ವರ್ಣಮಿತ್ರ ವೆಬ್ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುನ್ಸೂಚನೆ ನೀಡಲಾಗುತ್ತದೆ. 1533 ಟೋಲ್ ಫ್ರೀ ಸಂಖ್ಯೆ 24ಗಂಟೆಗಳ ಕಾಲ ಸಕ್ರಿಯವಾಗಿರುತ್ತದೆ. ನೇರವಾಗಿ ಕರೆ ಮಾಡಿ ನಾಗರಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ.
https://twitter.com/i/status/1846121792345117019
https://twitter.com/east_bengaluru/status/1846144707111379391
https://twitter.com/east_bengaluru/status/1846206906161156262