HomeKarnatakaBIG NEWS: ಹೆಚ್.ಡಿ.ಕೆ, ಜಮೀರ್ ಅಹ್ಮದ್ ಇಬ್ಬರೂ ಹೇಳಿದ್ದು ಸರಿಯಲ್ಲ ಎಂದ ಸಿಎಂ ಸಿದ್ದರಾಮಯ್ಯ

BIG NEWS: ಹೆಚ್.ಡಿ.ಕೆ, ಜಮೀರ್ ಅಹ್ಮದ್ ಇಬ್ಬರೂ ಹೇಳಿದ್ದು ಸರಿಯಲ್ಲ ಎಂದ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ನಡುವಿನ ವಾಕ್ಸಮರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ‘ಕರಿಯ’ ಎಂದು ಸಚಿವ ಜಮೀರ್ ಅಹ್ಮದ್ ಕರೆದಿದ್ದು ತಪ್ಪು. ಕುಮಾರಸ್ವಾಮಿ ಬಗ್ಗೆ ಜಮೀರ್ ಅಹ್ಮದ್ ಹಾಗೆ ಮಾತನಾಡಬಾರದಿತ್ತು ಎಂದಿದ್ದಾರೆ.

ಪ್ರೀತಿ ಇರಲಿ, ಏನೇ ಇರಲಿ ಹಾಗೆ ಹೇಳಬಾರದಿತ್ತು. ಕುಮಾರಸ್ವಾಮಿ ಕೂಡ ‘ಪಂಕ್ಚರ್’ ಎಂತ ಹೇಳಿದ್ದು ತಪ್ಪು. ಇಬ್ಬರೂ ನಾಯಕರು ಹೇಳಿದ್ದು ಸರಿಯಲ್ಲ. ಸಚಿವರಾಗಿರುವವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular