ದಾವಣಗೆರೆ: ದಾವಣಗೆರೆ ಉಪಚುನಾವಣಾ ಅಖಾಡದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಧುಮುಕಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದಿಂದ ಪಡಿತರ ಕೊಟ್ಟಿದ್ದು ನಾವು. ಸಿದ್ದರಾಮಯ್ಯ ಅನ್ನರಾಮಯ್ಯ ಎನ್ನುವುದಕ್ಕಿಂತ ಕನ್ನರಾಮಯ್ಯ ಎನ್ನಬಹುದು ಎಂದು ಕಿಡಿಕಾರಿದ್ದಾರೆ.
28 ಸಾವಿರ ಕೋಟಿ ಹಣ 15 ಲಕ್ಷ ಮನೆಗಳನ್ನು ಕಟ್ಟಲು ಬೇಕಾಗಿತ್ತು. ಆದರೆ ಈಗ ಅದೇ 15 ಲಕ್ಷ ಮನೆ ಕಟ್ಟಲು 2 ಸಾವಿರ ಕೋಟಿ ಇಟ್ಟಿದ್ದಾರೆ. ಗ್ಯಾಸ್ ಸಿಲಿಂಡರ್ಗಳ ಪೂರೈಕೆ ಕಷ್ಟ ಇದೆ. ಆದರೆ ಈ ಕಾಂಗ್ರೆಸ್ ಅವರು ಪ್ರಧಾನಿಗಳು ಪೂರೈಕೆ ಮಾಡುತ್ತಿಲ್ಲ ಎಂದು ಅರೋಪ ಮಾಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿನ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದು ಗೊತ್ತಿದೆ. ಆದರೆ ಪ್ರಧಾನಿಗಳು ಬೇರೆ ದೇಶಗಳ ಜೊತೆ ಇಟ್ಟುಕೊಂಡ ಸ್ನೇಹದಿಂದ ಅಲ್ಲಿಂದ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದಾರೆ. ಹಾರ್ಮುಜ್ ಜಲಸಂಧಿಯ ಮೂಲಕ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ಯಾಸ್ ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಇದರ ಬಗ್ಗೆ ಸಿಎಂ, ಡಿಸಿಎಂ, ಸುರ್ಜೇವಾಲ ಮಾತನಾಡಿದ್ದು ನೋಡಿದ್ದೆ. ಕೇಂದ್ರದಿಂದ ಬರುವ ಪಡಿತರವನ್ನು ಕೊಟ್ಟು ನಾವು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಸಿಎಂ ಖುರ್ಚಿ ಕದನ ನಡೆಯಿತ್ತಲೇ ಇವೆ. ಕಾರ್ಯಕರ್ತರ ಶಕ್ತಿಯ ಮೇಲೆ 40 ಸೀಟ್ ತೆಗೆದುಕೊಂಡಿದ್ದೇವೆ. ಪ್ರಾದೇಶಿಕ ಪಕ್ಷ ಕಟ್ಟಿ ನೀವು ಗೆಲ್ಲಿಸಿ ನೋಡಿ. ಕುಟುಂಬ ರಾಜಕಾರಣ ಎಂದು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತೀರಿ. ನೀವು ನಿಮ್ಮ ಮಗನನ್ನು ರಾಜಕೀಯಕ್ಕೆ ತರೆತಂದಿದ್ದಕ್ಕೆ ಏನು ಅಂತಾರೆ. ನಿಮ್ಮ ಮಗನನ್ನು ಟ್ರಾನ್ಫರ್ ಮಾಡಿಸಲು, ಬೇರೆ ಬೇರೆ ಕೆಲಸ ಮಾಡಲು ತಂದಿದ್ದೀರಾ?ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅವರು ಮಾತಿನಲ್ಲಿ ಆಡುವುದೇ ಬೇರೆ, ನಡೆದುಕೊಳ್ಳೋವುದೇ ಬೇರೆ. ಬಿಜೆಪಿ ಪಕ್ಷ ಹಿಂದುತ್ವ, ಕೋಮುವಾದಿ ಪಕ್ಷ ಅದು ಇದು ಅಂತ ಅರೋಪ ಮಾಡುತ್ತಾರೆ. ಆದರೆ ಈ ಬಾರಿ ಎನ್ಡಿಎ ಅಭ್ಯರ್ಥಿಯಾಗಿ ಸಾಮಾನ್ಯ ಕಾರ್ಯಕರ್ತನನ್ನು ಕಣದಲ್ಲಿ ಇಳಿಸಿದ್ದೇವೆ. ಸಾಮಾನ್ಯ ಕುಟುಂಬದಿಂದ ಬಂದ ಶ್ರೀನಿವಾಸ್ ದಾಸಕರಿಯಪ್ಪಗೆ ಟಿಕೆಟ್ ನೀಡಿದ್ದೇವೆ. ಆದರೆ ಕಾಂಗ್ರೆಸ್ ಮಾಡಿದ್ದು ಏನು?, ಯಾರಿಗೆ ಟಿಕೆಟ್ ನೀಡಿದ್ದಾರೆ?. ನಿತ್ಯ ಕೇಂದ್ರದ ಜೊತೆ ಸಂಘರ್ಷ ಮಾಡಿಕೊಂಡು ರಾಜ್ಯಕ್ಕೆ ಏನು ತರಲಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರು ಜಾತ್ಯತೀತ ನಾಯಕ ಎಂದು ಹೇಳುತ್ತಿದ್ದಾರೆ. ಅದೇ ಜಾತ್ಯತೀತ ಜನತಾದಳದಲ್ಲಿ ಇದ್ದಾಗ ನೀವು ಏನ್ ಮಾಡಿದ್ದು, ಎಲ್ಲಿ ಹೋದರು. ಅಹಿಂದ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಖುರ್ಚಿ ಅಲುಗಾಡಿಗಾದ ಮಾತ್ರ ಅಹಿಂದ ಅಹಿಂದ ಅಂತ ಹೇಳುತ್ತಾರೆ. ಖುರ್ಚಿ ಸರಿಯಾದಾಗ ಅಹಿಂದವನ್ನು ಹಿಂದೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಸಿದ್ದರಾಮಯ್ಯ ಅವರ ನಾಟಕ ಎಂದು ಗುಡುಗುದರು.

