HomeLatest News8 ವರ್ಷ ಸಿಎಂ, 45 ವರ್ಷಗಳ ಸುದೀರ್ಘ ರಾಜಕಾರಣ: ಮಾಸ್ ಲೀಡರ್ ಸಿದ್ದರಾಮಯ್ಯ ಮಾಡಿದ ಒಟ್ಟು...

8 ವರ್ಷ ಸಿಎಂ, 45 ವರ್ಷಗಳ ಸುದೀರ್ಘ ರಾಜಕಾರಣ: ಮಾಸ್ ಲೀಡರ್ ಸಿದ್ದರಾಮಯ್ಯ ಮಾಡಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರು: ಕರ್ನಾಟಕ ರಾಜಕಾರಣದ ಧ್ರುವತಾರೆ, ಅಹಿಂದ ವರ್ಗದ ಅಪ್ರತಿಮ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಒಂದು ಸುದೀರ್ಘ ಮತ್ತು ರೋಚಕ ಯುಗಾಂತ್ಯವಾಗಿದೆ. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದು, ವಕೀಲಿ ವೃತ್ತಿ ನಡೆಸಿ, ಹೋರಾಟಗಳ ಮೂಲಕವೇ ರಾಜಕೀಯ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಒಟ್ಟು 8 ವರ್ಷಗಳ ಕಾಲ ಆಡಳಿತ ನಡೆಸಿದವರು.

ತಮ್ಮ 45 ವರ್ಷಗಳ ರಾಜಕೀಯ ಜೀವನದಲ್ಲಿ ಶಾಸಕ, ಸಚಿವ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸೇರಿದಂತೆ ಹಲವು ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ ಸಿದ್ದರಾಮಯ್ಯ ಅವರು ಕೇವಲ ಜನರ ಪ್ರೀತಿಯ ಸಂಪತ್ತನ್ನಷ್ಟೇ ಗಳಿಸಿದ್ದಾರಾ ಅಥವಾ ಕೋಟಿ ಕೋಟಿ ಆಸ್ತಿ ಮಾಡಿದ್ದಾರಾ? ಕೇವಲ ಒಂದು ಬಾರಿ ಶಾಸಕರಾದವರೇ ನೂರಾರು ಕೋಟಿ ಒಡೆಯರಾಗುವ ಇಂದಿನ ದಿನಗಳಲ್ಲಿ, 8 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಆಸ್ತಿ 2013 ರಿಂದ 2023 ರ ವೇಳೆಗೆ ಎಷ್ಟು ಹೆಚ್ಚಾಗಿದೆ ಎಂಬ ಕುತೂಹಲ ಸಹಜ. ಅದಕ್ಕಿರುವ ಅಧಿಕೃತ ಉತ್ತರ ಇಲ್ಲಿದೆ:

2013 ರ ಮೊದಲ ಬಾರಿ ಸಿಎಂ ಆದಾಗ ಸಿದ್ದು ಆಸ್ತಿ ಎಷ್ಟಿತ್ತು?

2013 ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದ ವಿವರ ಹೀಗಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಟ್ಟು ಆಸ್ತಿ ಮೌಲ್ಯ: ₹13.61 ಕೋಟಿ

ಚರಾಸ್ತಿ: ₹2.39 ಕೋಟಿ

ಸ್ಥಿರಾಸ್ತಿ: ₹11.22 ಕೋಟಿ

ಒಟ್ಟು ಸಾಲ: ₹2.88 ಕೋಟಿ

ವಾಹನ: ಒಂದು ಇನ್ನೋವಾ ಕಾರು

ಚಿನ್ನ ಮತ್ತು ಬೆಳ್ಳಿ: ಸಿದ್ದರಾಮಯ್ಯ ಅವರ ಬಳಿ 350 ಗ್ರಾಂ ಚಿನ್ನ, ಅವರ ಪತ್ನಿ ಬಳಿ 540 ಗ್ರಾಂ ಚಿನ್ನ ಹಾಗೂ 4 ಕೆಜಿ ಬೆಳ್ಳಿ ಇತ್ತು.

ಆಸ್ತಿ ವಿವರ: ಮೈಸೂರಿನಲ್ಲಿ 4 ಎಕರೆ 4 ಗುಂಟೆ ಕೃಷಿ ಜಮೀನು, ಪತ್ನಿ ಹೆಸರಿನಲ್ಲಿ ಮೈಸೂರಿನಲ್ಲಿ 50/80 ಅಳತೆಯ ನಿವೇಶನ (Site) ಇತ್ತು. ಬೆಂಗಳೂರಿನಲ್ಲಿ 90/40 ವಿಸ್ತೀರ್ಣದ ಕಮರ್ಷಿಯಲ್ ಕಟ್ಟಡ, ಪುತ್ರನ ಹೆಸರಿನಲ್ಲಿ ಬಸವೇಶ್ವರನಗರದಲ್ಲಿ ಕಟ್ಟಡ, ಎಂಸಿ ಲೇಔಟ್‌ನಲ್ಲಿ ನಿವಾಸ, ಮಲ್ಲೇಶ್ವರಂನಲ್ಲಿ ಫ್ಲ್ಯಾಟ್ ಹಾಗೂ ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಪಿತ್ರಾರ್ಜಿತ ನಿವಾಸ ಹೊಂದಿದ್ದರು. ಜೊತೆಗೆ ₹1 ಕೋಟಿ ಹೂಡಿಕೆಯ ಉಲ್ಲೇಖವಿತ್ತು.

2023 ರ ಎರಡನೇ ಬಾರಿ ಸಿಎಂ ಆದಾಗ ಆಸ್ತಿ ಎಷ್ಟಾಯಿತು?

2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕೃತ ಪ್ರಮಾಣ ಪತ್ರದ ಪ್ರಕಾರ ಆಸ್ತಿ ಮೌಲ್ಯ ಹೀಗಿದೆ:

ಚರಾಸ್ತಿ ಮೌಲ್ಯ: ₹20.84 ಕೋಟಿ

ಸ್ಥಿರಾಸ್ತಿ ಮೌಲ್ಯ: ₹30.28 ಕೋಟಿ

ಕುಟುಂಬದ ಒಟ್ಟು ಆಸ್ತಿ: ₹51.93 ಕೋಟಿ

ಒಟ್ಟು ಸಾಲದ ಹೊರೆ: ₹23.08 ಕೋಟಿ (ವಿಶೇಷವೆಂದರೆ ಇದರಲ್ಲಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರಿಂದಲೇ ₹4 ಕೋಟಿ ಸಾಲ ಪಡೆದಿದ್ದಾರೆ).

ಚಿನ್ನ ಮತ್ತು ಬೆಳ್ಳಿ: ಸಿದ್ದರಾಮಯ್ಯ ಅವರ ಬಳಿ ಎಂದಿನಂತೆ 350 ಗ್ರಾಂ ಚಿನ್ನ ಹಾಗೂ ಬೆಳ್ಳಿ ಮಾತ್ರ 2 ಕೆಜಿಗೆ ಇಳಿಕೆಯಾಗಿದೆ. ಪತ್ನಿ ಬಳಿ 540 ಗ್ರಾಂ ಚಿನ್ನ ಹಾಗೂ 4.50 ಕೆಜಿ ಬೆಳ್ಳಿ ಇದೆ.

ಆಸ್ತಿ ವಿವರ: ವರುಣಾದಲ್ಲಿ ಪತ್ನಿ ಹೆಸರಿನಲ್ಲಿ 1.08 ಗುಂಟೆ ಪಿತ್ರಾರ್ಜಿತ ಜಮೀನು ಹಾಗೂ ಮೈಸೂರಿನ ಜಯಪುರದಲ್ಲಿ ಪತ್ನಿ ಹೆಸರಿನಲ್ಲೇ 7 ಎಕರೆ 17 ಗುಂಟೆ ಕೃಷಿ ಭೂಮಿ ಇದೆ.

ಶಿಕ್ಷಣ ಮತ್ತು ಕಾನೂನು ಹೋರಾಟಗಳು:

ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಮುಗಿಸಿದ್ದ ಸಿದ್ದರಾಮಯ್ಯ, ಬಳಿಕ 1972 ರಲ್ಲಿ ಮೈಸೂರಿನ ಪ್ರತಿಷ್ಠಿತ ಶಾರದಾ ವಿಲಾಸ್ ಕಾಲೇಜಿನಲ್ಲಿ ಎಲ್‌ಎಲ್‌ಬಿ (LLB) ಪದವಿ ಪೂರೈಸಿದ್ದರು. ರಾಜಕೀಯ ಹೋರಾಟಗಳ ಹಿನ್ನೆಲೆಯಲ್ಲಿ 2023 ರ ಅಫಿಡವಿಟ್ ಪ್ರಕಾರ ಇವರ ಮೇಲೆ ಒಟ್ಟು 13 ರಾಜಕೀಯ ಪ್ರೇರಿತ ಪ್ರಕರಣಗಳು ದಾಖಲಾಗಿವೆ.

ಇತರ ನಾಯಕರಿಗೆ ಹೋಲಿಸಿದರೆ ಸಿದ್ದು ಆಸ್ತಿ ಕಮ್ಮಿ

ಇಂದಿನ ಕೋಟ್ಯಧಿಪತಿ ರಾಜಕಾರಣಿಗಳು ಮತ್ತು ಉದ್ಯಮಿ ನಾಯಕರಿಗೆ ಹೋಲಿಕೆ ಮಾಡಿದರೆ, ಸಿದ್ದರಾಮಯ್ಯ ಅವರ ಒಟ್ಟು ₹51.93 ಕೋಟಿ ಆಸ್ತಿ ಮೌಲ್ಯ ಅತ್ಯಂತ ಕಡಿಮೆಯೆಂದೇ ಹೇಳಬಹುದು. ಹತ್ತಾರು ವರ್ಷಗಳ ಕಾಲ ಸಚಿವ, ಉಪಮುಖ್ಯಮಂತ್ರಿ ಹಾಗೂ 8 ವರ್ಷಗಳ ಕಾಲ ರಾಜ್ಯದ ಗರಿಷ್ಠ ಅಧಿಕಾರ ಅನುಭವಿಸಿದ ನಾಯಕರೊಬ್ಬರ ಆಸ್ತಿ ಇಷ್ಟೇ ಇರುವುದು ಅವರ ಪ್ರಾಮಾಣಿಕ ರಾಜಕಾರಣಕ್ಕೆ ಸಾಕ್ಷಿ ಎನ್ನುತ್ತಾರೆ ಅವರ ಬೆಂಬಲಿಗರು.

ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಅಹಿಂದ ವರ್ಗದ ಹರಿಕಾರನಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರು ತಮ್ಮ ಆಸ್ತಿಗಿಂತಲೂ, ತಮ್ಮ ವಿಶಿಷ್ಟ ರಾಜಕೀಯ ಶೈಲಿ, ವಾಕ್ಚಾತುರ್ಯ ಹಾಗೂ ಬಡವರ ಪರ ಯೋಜನೆಗಳ (ಭಾಗ್ಯಗಳು) ಕಾರಣಕ್ಕಾಗಿಯೇ ಇತಿಹಾಸದ ಪುಟಗಳಲ್ಲಿ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular