BREAKING NEWS: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ; ಬೋರ್ಡ್ ಚೇಂಜ್ ಮಾಡಲು ಡೆಡ್ ಲೈನ್; ನಿಯಮ ಮೀರಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿಎಂ

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆಡಳಿತ ಭಾಷೆ ಕನ್ನಡ. ವ್ಯವಹಾರವೂ ಕನ್ನಡದಲ್ಲಿಯೇ ಇರಬೇಕು. ಈ ವಿಚಾರವಾಗಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡ ಕಡ್ಡಾಯ ವಿಚಾರವಾಗಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಮಫಲಕಗಳು, ಜಾಹೀರಾತುಗಳಲ್ಲಿಯೂ ಶೆ.60ರಷ್ಟು ಕನ್ನಡವೇ ಇರಬೇಕು. ಶೇ.40ರಷ್ಟು ಮಾತ್ರ ಬೇರೆ ಭಾಷೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿಯಮ ಜಾರಿಗೆ ತರಲಾಗುವುದು ಎಂದರು.

ಈ ಹಿಂದೆಯೂ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೂ ನಾಮಫಲಕಗಳ ಬಗ್ಗೆ ಕಟ್ಟುನಿಟ್ಟಾಗಿ ನಿಯಮ ಜಾರಿಯಾಗಿರಲಿಲ್ಲ. ಹಿಂದೆ ಶೇ.50ರಷ್ಟು ಕನ್ನಡ ಭಾಷೆಗೆ ಆದ್ಯತೆ ಎಂದು ಸುತ್ತೋಲೆ ಇತ್ತು. ಈಗ ಸುತ್ತೋಲೆ ತಿದ್ದುಪಡಿ ಮಾಡಲು ನಿರ್ಧರಿಸಿದ್ದು, ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು. ಈ ನಿಯಮ ರಾಜ್ಯಾದ್ಯಂತ ಅನ್ವಯವಾಗಲಿದೆ. ನಾಮಫಲಕಗಳು, ಜಾಹಿರಾತುಗಳು ಎಲ್ಲದರಲ್ಲಿಯೂ ಕನ್ನಡ ಕಡ್ಡಾಯ. ಬೋರ್ಡ್ ಚೇಂಜ್ ಮಾಡಲು ಕಾಲಾವಕಾಶ ನೀಡಲಾಗಿದೆ. 2024ರ ಫೆಬ್ರವರಿ 28ರೊಳಗಾಗಿ ಬೋರ್ಡ್ ಗಳನ್ನು ಬದಲಿಸಿ ಕನ್ನಡ ಬೋರ್ಡ್ ಹಾಕಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read